ಟಾರ್ಗೆಟ್ ನೀಟ್ 2024 ರಿಪೀಟರ್‍ಸ್ ಬ್ಯಾಚ್-ಅಂಬಿಕಾ ಸಂಸ್ಥೆಯಿಂದ ಜೂನ್.26ರಿಂದ ತರಗತಿಗಳು ಆರಂಭ

0

ಆಯ್ದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಜತೆಗೆ ‘ಶುಲ್ಕ ವಾಪಸ್’ ಕೊಡುಗೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ವತಿಯಿಂದ ಟಾರ್ಗೆಟ್ ನೀಟ್ 2024ರ ತರಗತಿಗಳು ಜೂನ್ 26ರಿಂದ ಆರಂಭಗೊಳ್ಳಲಿವೆ. 2023ರ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಗಳಿಸದವರಿಗೆ ಇದೊಂದು ಅತ್ಯುತ್ತಮ ಅವಕಾಶವೆನಿಸಿದೆ. ಪುತ್ತೂರು ಹಾಗೂ ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳು ಈ ಕೋಚಿಂಗ್‌ನ ಉಪಯೋಗವನ್ನು ಪಡೆಯಲಿದ್ದಾರೆ.


ರಾಜ್ಯದ ತಜ್ಞ ಉಪನ್ಯಾಸಕ ವೃಂದ ಅಂಬಿಕಾ ಅಕಾಡೆಮಿಯಲ್ಲಿ ತರಗತಿ ನಡೆಸಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೆಡೆಗೂ ಪರಿಪೂರ್ಣ ಗಮನ ಹರಿಸುವ ಬದ್ಧತೆಯನ್ನು ಸಂಸ್ಥೆ ಒಡಮೂಡಿಸಿಕೊಂಡಿದೆ. ಪ್ರತೀ ವಾರ ನೀಟ್ ಮಾದರಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ. ನೀಟ್ ಪರೀಕ್ಷೆಯ ಸಿಲೆಬಸ್‌ಗೆ ಸಂಬಂಧಿಸಿದಂತೆ ಪ್ರತಿಯೊಂದು ವಿಷಯಗಳಿಗೂ ನೋಟ್ಸ್ ಒದಗಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಸಂಪೂರ್ಣ ಮಾರ್ಗದರ್ಶನ ನೀಡಲಾಗುತ್ತದೆ. ಹುಡುಗರಿಗೆ ಹಾಗೂ ಹುಡುಗಿಯರಿಗೆ ಅತ್ಯುತ್ತಮ ಹಾಸ್ಟೆಲ್ ವ್ಯವಸ್ಥೆಯನ್ನು ಒದಗಿಸಿಕೊಡಲಾಗುತ್ತದೆ ಹಾಗೂ ಉಪನ್ಯಾಸಕ ಸಹಿತವಾದ ಅಧ್ಯಯನ ಅವಧಿಯನ್ನು ಕಲ್ಪಿಸಿಕೊಡಲಾಗುತ್ತದೆ. ಇದರಿಂದ ಅಧ್ಯಯನ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಷಯಾವಾರು ಸಂದೇಹಗಳನ್ನು ಪರಿಹರಿಸಲು ಸಾಧ್ಯವಾಗಲಿದೆ.


ಇಷ್ಟಲ್ಲದೆ ಈ ಹಿಂದಿನ ನೀಟ್ ಪರೀಕ್ಷೆಗಳ ಆಧಾರದಲ್ಲಿ 75ಕ್ಕೂ ಅಧಿಕ ಮಾದರಿ ನೀಟ್ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ.

ಅಂಬಿಕಾ ನೀಟ್ ಸಾಧನೆ:
ಪ್ರತಿ ವರ್ಷವೂ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮೆರೆಯುತ್ತಿದೆ. 2023ರ ನೀಟ್ ಪರೀಕ್ಷೆಯಲ್ಲಿ ಒಟ್ಟು 7 ವಿದ್ಯಾರ್ಥಿಗಳಿಗೆ ೫೪೦ಕ್ಕಿಂತ ಅಧಿಕ ಅಂಕ, 11 ವಿದ್ಯಾರ್ಥಿಗಳಿಗೆ 460ಕ್ಕಿಂತ ಅಧಿಕ ಅಂಕ ದಾಖಲಾಗಿದೆ. ತನ್ಮೂಲಕ 14 ಮಂದಿ ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

2022-23ರ ನೀಟ್ ಫಲಿತಾಂಶದಲ್ಲಿ 500ರಿಂದ ಅಧಿಕ ಅಂಕ ದಾಖಲಿಸಿದವರಿಗೆ ಒಟ್ಟು ಶುಲ್ಕದಲ್ಲಿ ಐವತ್ತು ಶೇಕಡಾ ರಿಯಾಯಿತಿ ದೊರಕಲಿದೆ. 450ರಿಂದ 499ರ ಮಧ್ಯೆ ಅಂಕ ದಾಖಲಿಸಿದ ವಿದ್ಯಾರ್ಥಿಗಳಿಗೆ ಒಟ್ಟು ಶುಲ್ಕದ ಇಪ್ಪತ್ತೈದು ಶೇಕಡಾ ರಿಯಾಯಿತಿ, 400 ಅಂಕದಿAದ 449ರ ಮಧ್ಯೆ ಅಂಕ ದಾಖಲಿಸಿದ ವಿದ್ಯಾರ್ಥಿಗಳಿಗೆ ಹದಿನೈದು ಶೇಕಡಾ ರಿಯಾಯಿತಿ ದೊರಕಲಿದೆ.

ವಿಶೇಷ ಕೊಡುಗೆ:
2023ರ ನೀಟ್ ಪರೀಕ್ಷೆಯಲ್ಲಿ ನಿಗದಿತ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಮೆಡಿಕಲ್ ಸೀಟ್ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಆದರೆ ಕೆಲವರು ತಮಗೆ ಮೆಡಿಕಲ್ ಸೀಟ್ ದೊರಕುತ್ತದೆಯೇ ಇಲ್ಲವೇ ಅಥವ ಬಯಸಿದ ಕಾಲೇಜಿನಲ್ಲಿ ಪ್ರವೇಶಾತಿ ದೊರಕುತ್ತದೆಯೋ ಇಲ್ಲವೋ ಎಂಬ ಅನುಮಾನದಲ್ಲಿದ್ದಾರೆ. ಅಂತಹವರು ಕೂಡ ಟಾರ್ಗೆಟ್ ನೀಟ್ 2024 ತರಗತಿಗಳಿಗೆ ದಾಖಲಾತಿ ಪಡೆಯಬಹುದು. ಅಕಸ್ಮಾತ್ ಪ್ರಸ್ತುತ ಶೈಕ್ಷಣಿಕ ವರ್ಷದ ಮೆಡಿಕಲ್ ಸೀಟ್ ಪ್ರಕ್ರಿಯೆಯಲ್ಲಿ ಅವರಿಗೆ ಬಯಸಿದಂತೆ ಸೀಟ್ ದೊರೆತಲ್ಲಿ ಅವರಿಂದ ಪಡೆದ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ. ಸಂಪರ್ಕಕ್ಕೆ : 9448835488, 9741481600, 8431285970

LEAVE A REPLY

Please enter your comment!
Please enter your name here