ಸಂಪೂರ್ಣ ನೆಮ್ಮದಿ: ಸ್ವಲ್ಪವೇ ಹೆಚ್ಚಿನ ಪಾವತಿಯೊಂದಿಗೆ ಆರಂಭವಾಗಿದೆ ಹರ್ಷ ಮಾನ್ಸೂನ್ ಮ್ಯಾಜಿಕ್

0

ಪುತ್ತೂರು: ಮಳೆಗಾಲದಲ್ಲಿ ಶಾಪಿಂಗ್‌ ಉತ್ಸಾಹ ಚಿಮ್ಮಿಸುವ ‘ಹರ್ಷ ಮಾನ್ಸೂನ್ ಮ್ಯಾಜಿಕ್’ ಜೂನ್ 17ರಿಂದ ಆರಂಭಗೊಂಡಿದ್ದು, ಪುತ್ತೂರು, ಉಡುಪಿ, ಮಂಗಳೂರು, ಬ್ರಹ್ಮಾವರ, ಸುರತ್ಕಲ್, ಶಿವಮೊಗ್ಗ, ಕುಂದಾಪುರ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಕಲಬುರಗಿ ಹಾಗೂ ಬೆಂಗಳೂರಿನ ಹರ್ಷ ಮಳಿಗೆಗಳಲ್ಲಿ ಜುಲೈ 30ರವರೆಗೆ ನಡೆಯಲಿದೆ.


ಫ್ಯಾಬ್ ಫೋರ್‌ಕೊಡುಗೆ:
ಪ್ರತಿ ಬಾರಿಯು ಹೊಸ ಹೊಸ ಕೊಡುಗೆಗಳೊಂದಿಗೆ ಆಕರ್ಷಣೀಯವಾಗುವ ಹರ್ಷ ಮಾನ್ಸೂನ್ ಮ್ಯಾಜಿಕ್, ಈ ಬಾರಿ ತನ್ನ ಗ್ರಾಹಕರಿಗಾಗಿ ವಿಶೇಷವಾಗಿ ಆಯ್ದ ಗೃಹೋಪಕರಣಗಳ ಮೇಲೆ 4 ವರ್ಷಗಳವರೆಗಿನ ಹೆಚ್ಚುವರಿ ವಾರಂಟಿಯನ್ನು ಪರಿಚಯಿಸುತ್ತಿದೆ. ಗ್ರಾಹಕರು ತಮಗಿಷ್ಟವಾದ ಗೃಹೋಪಕರಣಗಳನ್ನು ವಿಶೇಷ ಕೊಡುಗೆಗಳೊಂದಿಗೆ ಖರೀದಿಸುವುದರ ಜೊತೆಗೆ ಸ್ವಲ್ಪವೇ ಹೆಚ್ಚಿನ ಪಾವತಿಯೊಂದಿಗೆ 4 ವರ್ಷಗಳ ಅಧಿಕ ವಾರಂಟಿಯನ್ನೂ ಸಹ ಆಯ್ದುಕೊಳ್ಳಬಹುದಾಗಿದೆ. ಈ ಅಧಿಕ ವಾರಂಟಿಯು ಉತ್ಪನ್ನಕ್ಕೆ ಸಂಬಂಧಿಸಿದ ಹಲವು ಸೇವಾ-ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದರಿಂದ ಗ್ರಾಹಕರು ಖರೀದಿಯ ನಂತರವೂ ಸಂಪೂರ್ಣ ನೆಮ್ಮದಿಯಿಂದ ಇರಬಹುದು.


ಮ್ಯಾಜಿಕ್‌ ಕ್ಯಾಶ್‌ ಕೊಡುಗೆ:
ಎಲ್‌ಇಡಿ ಟಿವಿ, ವಾಶಿಂಗ್ ಮಶಿನ್, ರೆಫ್ರಿಜರೇಟರ್, ಏರ್‌ಕಂಡೀಷನರ್, ಸ್ಮಾರ್ಟ್‌ಫೋನ್ ಸಹಿತ ಆಯ್ದ ಗೃಹೋಪಕರಣಗಳ ಖರೀದಿಯೊಂದಿಗೆ ಮ್ಯಾಜಿಕ್‌ಕ್ಯಾಶ್ ಯೋಜನೆಯಡಿ ಸ್ಥಳದಲ್ಲೇ ಸ್ಕ್ರಾಚ್ ಮಾಡಿ 9,990ರ ವರೆಗೆ ಖಚಿತ ಕ್ಯಾಶ್‌ಬ್ಯಾಕ್ ಗೆಲ್ಲುವ ಅದೃಷ್ಟ ದೊರೆಯಲಿದೆ.
ಇದರ ಜೊತೆಗೆ ಆಯ್ದ ಬ್ಯಾಂಕ್‌ಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮುಖೇನ ಖರೀದಿಯೊಂದಿಗೆ 10,000ದ ವರೆಗಿನ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಹಳೆಯ ಗೃಹೋಪಕರಣಗಳನ್ನು ವಿನಿಮಯಗೊಳಿಸಿ ಹೊಸ ಗೃಹೋಪಕರಣಗಳನ್ನು ಖರೀದಿಸಿ ಹಾಗೂ 3,000 ವರೆಗಿನ ಅಪ್‌ಗ್ರೇಡ್ ಬೋನಸ್ ಪಡೆಯಬಹುದು.


ಇದರೊಂದಿಗೆ ಹರ್ಷ ಮಾನ್ಸೂನ್ ಮ್ಯಾಜಿಕ್‌ನಲ್ಲಿ ನವನವೀನ ವಸ್ತು ವೈವಿಧ್ಯಗಳು ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಮೌಲ್ಯದೊರೆಯುವ ಕಾಂಬಿ ಯೋಜನೆಗಳು, ಹಳೆಯ ವಸ್ತುಗಳನ್ನು ಬದಲಾಯಿಸಿ ಹೊಸ ತಂತ್ರಜ್ಞಾನದ ಉಪಕರಣಗಳನ್ನು ಮನೆಗೆ ಕೊಂಡೊಯ್ಯಲು ಅನುವಾಗುವ ವಿನಿಮಯ ಕೊಡುಗೆಗಳು, ಖರೀದಿಯೊಂದಿಗೆ ದೊರೆಯುವ ಉಚಿತ ಉಡುಗೊರೆಗಳು ಅಷ್ಟೇ ಅಲ್ಲದೇ ಹತ್ತು ಹಲವಾರು ಮುಂಗಾರಿನ ಮ್ಯಾಜಿಕಲ್ ಕೊಡುಗೆಗಳು ಗ್ರಾಹಕರಿಗಾಗಿ ಕಾದಿವೆ.


ಮಳೆಗಾಲದಲ್ಲಿ ಗೃಹಿಣಿಯರಿಗೆ ಬಟ್ಟೆ ಒಣಗಿಸುವ ಚಿಂತೆ ದೂರವಾಗಿಸಲು ಹೊಸ ತಂತ್ರಜ್ಞಾನದ ವಾಶರ್‌ಕಮ್ 100% ಡ್ರೈಯರ್. ಅಗತ್ಯ ವಸ್ತುಗಳನ್ನು ಕೆಡದಂತೆ ಸಂರಕ್ಷಿಸುವ ಜೊತೆಗೆ ತಾಜಾತನ ಉಳಿಸುವ ಆಧುನಿಕ ತಂತ್ರಜ್ಞಾನದ ಡಬಲ್ ಡೋರ್, ಸಿಂಗಲ್ ಡೋರ್, ಫ್ರೋಸ್ಟ್ ಫ್ರೀ ರೆಫ್ರಿಜರೇಟರ್‌ಗಳು. ಆಹ್ಲಾದಕರ ಜೀವನಕ್ಕಾಗಿ ವಿದ್ಯುತ್ ಉಳಿಸುವ 5-ಸ್ಟಾರ್, ಇನ್ವರ್ಟರ್ ಏಸಿಗಳು. ಮನೆ ಮಂದಿಗೆಲ್ಲಾ ಮನೋರಂಜನೆ ನೀಡಲು ಉತ್ಕೃಷ್ಟವಾದ ಅತ್ಯಾಧುನಿಕ ತಂತ್ರಜ್ಞಾನದ 4ಕೆ, ಓಎಲ್‌ಇಡಿ, ಕ್ಯೂಎಲ್‌ಇಡಿ, ಹಾಗೂ ಸ್ಲಿಮ್ ಎಲ್‌ಇಡಿ ಟಿವಿಗಳು, ಹೋಮ್ ಥಿಯೇಟರ್‌ಗಳು, ಪ್ಲೇ ಸ್ಟೇಷನ್‌ಗಳು, ಮಳೆಗಾಲದ ರುಚಿಕರ ತಿನಿಸುಗಳನ್ನು ತಯಾರಿಸಲು ಹಾಗು ಕ್ಷಣಮಾತ್ರದಲ್ಲಿ ಬಿಸಿಮಾಡಲು ಮೈಕ್ರೋವೇವ್ ಅವನ್‌ಗಳು, ಮಿಕ್ಸರ್-ಗ್ರೈಂಡರ್‌ಗಳು, ವಿವಿಧ ಅಡುಗೆಯ ಸಾಧನಗಳು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಇನ್ನಷ್ಟು ಹತ್ತಿರವಾಗಲು ಹೊಸ ತಂತ್ರಜ್ಞಾನದ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಕ್ಯಾಮರಾಗಳು ಹಾಗೂ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ‘ಹರ್ಷ ಮಾನ್ಸೂನ್ ಮ್ಯಾಜಿಕ್’ ನಲ್ಲಿ ದೊರೆಯಲಿದೆ.


ಇಷ್ಟೇ ಅಲ್ಲದೆ, ಗ್ರಾಹಕರಿಗೆ ಇನ್ನಷ್ಟು ಸಹಕಾರಿಯಾಗುವಂತೆ ಐಡಿಎಫ್‌ಸಿ, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ, ಹೆಚ್‌ಡಿಬಿ ಬ್ಯಾಂಕ್‌ಗಳ ಮುಖೇನ ತಮಗೆ ಸೂಕ್ತ ಹೊಂದುವ ಯೋಜನೆಗಳನ್ನು ಆಯ್ಕೆ ಮಾಡಿ ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಪಾವತಿಸುವ ಮೂಲಕ ತಮ್ಮ ನೆಚ್ಚಿನ ವಸ್ತುಗಳನ್ನು ಮನೆಗೊಯ್ಯಬಹುದಾಗಿದೆ. ಇದರೊಂದಿಗೆ ಇನ್ನೂ ಹಲವಾರು ರೀತಿಯ ಆಕರ್ಷಕ ಕೊಡುಗೆಗಳು ಹಾಗು ಸೌಲಭ್ಯಗಳು ‘ಹರ್ಷ ಮಾನ್ಸೂನ್ ಮ್ಯಾಜಿಕ್’ನಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here