ಪುತ್ತೂರು: ಔಷಧೀಯ ಗಿಡಮೂಲಿಕೆಗಳು ನಶಿಸಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ಅವುಗಳ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ “ವಿವೇಕ ಸಂಜೀವಿನಿ” ಎಂಬ ಕಾರ್ಯಕ್ರಮವನ್ನು ನೆಹರು ನಗರದ ಸೆಂಟ್ರಲ್ ಸ್ಕೂಲ್ ನಲ್ಲಿ ಜೂ.26 ರಂದು ಆಯೋಜಿಸಲಾಯಿತು.
ತರಗತಿವಾರು ವಿದ್ಯಾರ್ಥಿಗಳಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸುವುದರ ಮೂಲಕ ಮುಂದಿನ ಪೀಳಿಗೆಗೂ ಔಷಧೀಯ ಸಸ್ಯಗಳ ಉಪಯೋಗ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬುದನ್ನು ಪ್ರಾಯೋಗಿಕವಾಗಿ ಶಾಲಾ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ತಿಳಿಸಿಕೊಟ್ಟರು.