ಅಡ್ಡ ಬಂದ ನಾಯಿ-ದಿಢೀರ್ ಬ್ರೇಕ್: ಸ್ಕೂಟರ್ ಪಲ್ಟಿ

0

ಪುತ್ತೂರು:ರಸ್ತೆ ಮಧ್ಯೆ ನಾಯಿಯೊಂದು ಓಡಾಡಿದಾಗ ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲೆಂದು ಸ್ಕೂಟರ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ಪಲ್ಟಿಯಾದ ಘಟನೆ ಪರ್ಲಡ್ಕದಲ್ಲಿ ನಡೆದಿದೆ. ಸ್ಕೂಟರ್ ಸವಾರ ದಾವೂದ್ ಎಂಬವರು ಪರ್ಲಡ್ಕದಿಂದ ದರ್ಬೆ ಕಡೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಪರ್ಲಡ್ಕದಲ್ಲಿ ರಸ್ತೆ ಮಧ್ಯೆ ನಾಯಿಯೊಂದು ಅಡ್ಡಾದಿಡ್ಡಿ ಓಡಿದ್ದರಿಂದ ದಾವೂದ್ ಅವರು ಒಮ್ಮೆಲೇ ಸ್ಕೂಟರ್ ಬ್ರೇಕ್ ಹಾಕಿದಾಗ ಸ್ಕೂಟರ್ ಪಲ್ಟಿಯಾಗಿದೆ.ಈ ವೇಳೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ದಾವೋದ್ ಮತ್ತು ಸಹ ಸವಾರ ಮಹಮ್ಮದ್ ಅರ್ಷದ್ ಅವರು ಗಾಯಗೊಂಡಿದ್ದಾರೆ.ತೀವ್ರ ಗಾಯಗೊಂಡ ಮಹಮ್ಮದ್ ಅರ್ಷದ್ ಅವರನ್ನು ಮಂಗಳೂರು ಕೊಲಾಸೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here