ಸಾರಿಗೆ ಇಲಾಖೆ ಅನುಮತಿ ಪಡೆಯದೆ ಪಿಕಪ್ ನ್ನು ಟಿಪ್ಪರ್ ನ್ನಾಗಿ ಬದಲಾಯಿಸಿ ಬಾಡಿಗೆ ಕ್ರಮ ಕೈಗೊಳ್ಳುವಂತೆ ದರ್ಬೆ ಗೂಡ್ಸ್ ವಾಹನ ಚಾಲಕ, ಮಾಲಕರ ಸಂಘದಿಂದ ಮನವಿ

0

ಪುತ್ತೂರು: ಸಾರಿಗೆ ಇಲಾಖೆಯ ಅನುಮತಿ ಪಡೆಯದೆ ಪಿಕಪ್ ವಾಹನವನ್ನು ಟಿಪ್ಪರ್ ವಾಹನಗಳನ್ನಾಗಿ ಬದಲಾಯಿಸಿ ಅನಧಿಕೃತವಾಗಿ ಬಾಡಿಗೆ ಮಾಡುತ್ತಿದ್ದಾರೆ. ಕೂಡಲೇ ಟಿಪ್ಪರ್ ಪರಿವರ್ತಿತ ವಾಹನಗಳನ್ನು ಮೊದಲಿನಂತೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ದರ್ಬೆ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರ ಸಂಘದವರು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.


ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಸರಕು ಸಾಗಾಟ ಉದ್ಯಮವನ್ನು ನಂಬಿ ಸುಮಾರು ೫೦ಕ್ಕೂ ಮಿಕ್ಕಿ ಪಿಕಪ್ ವಾಹನಗಳನ್ನು ಸಣ್ಣ ಉದ್ಯಮಿಗಳು ಯಾ ಚಾಲಕರ ಮೂಲಕ ನಡೆಸಿಕೊಂಡು ಬರುತ್ತಿರುವವರಾಗಿದ್ದಾರೆ. ಇತ್ತೀಚೆಗೆ ಈ ಪರಿಸರದ ಸುಮಾರು ೫೦ಕ್ಕೂ ಮಿಕ್ಕಿ ಪಿಕಪ್ ವಾಹನಗಳನ್ನು ಟಿಪ್ಪರ್‌ಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದೆ. ಗ್ರಾಹಕರು ಟಿಪ್ಪರ್ ಪರಿವರ್ತಿತ ವಾಹನಗಳನ್ನೇ ಸರಕು ಸಾಗಾಟ ಇತ್ಯಾದಿಗಳಿಗೆ ಆದ್ಯತೆ ನೆಲೆಯಲ್ಲಿ ಒಯ್ಯುತ್ತಿದ್ದು ಇದರಿಂದ ನಮ್ಮ ಪಿಕಪ್ ವಾಹನಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಪಿಕಪ್ ವಾಹನದವರು ಸರದಿ ಸಾಲಿನಲ್ಲಿ ನಿಲ್ಲುವುದು ಮಾತ್ರ ಆಗಿದ್ದು ಬಾಡಿಗೆ ಇಲ್ಲವಾಗಿದೆ. ಇದೇ ರೀತಿ ಮುಂದುವರೆದಲ್ಲಿ ನಮ್ಮ ಪಿಕಪ್ ವಾಹನದ ಚಾಲಕ, ಮಾಲಕರಿಗೆ ಆದಾಯವಿಲ್ಲದೆ ಕುಟುಂಬ ಉಪವಾಸ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ.


ಆದ್ದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಿಕಪ್ ವಾಹನ ಚಾಲಕ, ಮಾಲಕರ ಹಿತದೃಷ್ಟಿಯಿಂದ, ಕೂಡಲೇ ಪರಿವರ್ತಿತ ವಾಹನಗಳನ್ನು ಮೊದಲಿನಂತೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಮನವಿ ನೀಡುತ್ತಿರುವ ಸಂದರ್ಭದಲ್ಲಿ ದರ್ಬೆ ಗೂಡ್ಸ್ ವಾಹನ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್ ದರ್ಬೆ ಹಾಗೂ ಪಿಕಪ್ ವಾಹನ ಚಾಲಕ, ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here