ಮಣಿಪುರದಲ್ಲಿ ನಡೆದಿರುವ ದಾರುಣ ಘಟನೆ-ಮಾಯಿದೆ ದೇವುಸ್ ಚರ್ಚ್ ನ ಕಥೋಲಿಕ್ ಸಭಾದಿಂದ ಮೌನ ಪ್ರತಿಭಟನೆ

0

ಪುತ್ತೂರು: ಮಣಿಪುರದಲ್ಲಿ ನಡೆದಿರುವ ದಾರುಣ ಘಟನೆಗೆ ಪ್ರತಿರೋಧ ತೋರಿ ಮಂಗಳೂರು ಧರ್ಮಪ್ರಾಂತ್ಯದ 124 ಚರ್ಚ್ ಗಳ ಪರಿಸರದಲ್ಲಿ ಫಲಕಗಳನ್ನು ಹಿಡಿದು ಹತ್ತು ನಿಮಿಷಗಳ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಮಂಗಳೂರಿನ ಬಿಷಪ್ ಹೌಸಿನಲ್ಲಿ ಕಾರ್ಯಾಚರಿಸುತ್ತಿರುವ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಡಿ’ಸೋಜರವರು ಆಯಾ ಚರ್ಚ್ ವ್ಯಾಪ್ತಿಯ ಕಥೋಲಿಕ್ ಸಭಾ ಸಂಘಟನೆಗೆ ಮನವಿ ಮುಖೇನ ಸೂಚಿಸಿತ್ತು.


ಅದರಂತೆ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ನ ಕಥೋಲಿಕ್ ಸಭಾದ ವತಿಯಿಂದ ಧರ್ಮಗುರುಗಳು, ಕ್ರೈಸ್ತ ಬಾಂಧವರು ಒಗ್ಗೂಡಿ ಜು.23 ರಂದು ಬೆಳಿಗ್ಗೆ ಚರ್ಚ್ ಮುಖ್ಯ ದ್ವಾರದ ಬಳಿ ಘೋಷಣೆಗಳ ಫಲಕಗಳನ್ನು ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಲಾಯಿತು. ಈ ಮೌನ ಪ್ರತಿಭಟನೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಕಥೋಲಿಕ್ ಸಭಾ ವಲಯಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಥೋಲಿಕ್ ಸಭಾ ಅಧ್ಯಕ್ಷ ಅರುಣ್ ಪಿಂಟೋ, ಉಪಾಧ್ಯಕ್ಷ ರೋಯ್ಸ್ ಪಿಂಟೋ, ಕಾರ್ಯದರ್ಶಿ ಪಾವ್ಲ್ ಮೊಂತೇರೊ, ಕೋಶಾಧಿಕಾರಿ ರೋಶನ್ ಡಾಯಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಚರ್ಚ್ ಪಾಲನಾ ಸಮಿತಿ ಸದಸ್ಯರು, ವಿವಿಧ ಸಂಘಟನೆಯ ಸದಸ್ಯರು, ಧರ್ಮಭಗಿನಿಯರು, ಕ್ರೈಸ್ತ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here