ಮನ ರಂಜಿಸಿದ ಮರಾಟಿ ಯುವ ವೇದಿಕೆ | ಕೆಸರಿನಲ್ಲಿ ಎದ್ದು-ಬಿದ್ದು ಕುಪ್ಪಳಿಸಿದ ಮಂದಿ-ಮಕ್ಕಳು…

0

“ಹಿಂದೂ ಸಮಾಜದ ಪ್ರಬಲ ಶಕ್ತಿಯೇ ಮರಾಟಿಗರು-ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಹಿಂದೂ ಸಮಾಜಕ್ಕೆ ನೋವುಗಳೂ ,ಅವಮಾನಗಳೂ ಆಗಿರತಕ್ಕತಂಹ ಸಂದರ್ಭದಲ್ಲಿ ವಿಶೇಷವಾಗಿ ಶಕ್ತಿ ಕೊಟ್ಟಂಥವರು ಮರಾಟಿ ಸಮುದಾಯದವರೆಂಬುದನ್ನೂ ನಾನು ಸ್ಪಷ್ಟವಾಗಿ ಹೇಳಬಲ್ಲೆ. ಧರ್ಮದಿಂದಲೇ ನಮ್ಮೆಲ್ಲರ ಉಳಿವು ಸಾಧ್ಯ . ಇಂತಹ ಕ್ರೀಡೆಗಳ ಮೂಲಕ ಕೃಷಿಕಾರ್ಯಗಳ ಬಗ್ಗೆ ಯುವ ಜನತೆಗೂ ಅರಿವು ಸಿಕ್ಕಂತಾಗಿ, ಅವರು ಒಲವು ತೋರಲು ಸಾಧ್ಯ.ನಮ್ಮ ಸಂಸ್ಕೃತಿ , ವಿಚಾರಧಾರೆಯ ಮುಖಾಂತರ ನಾವೆಲ್ಲರೂ ಸಂಘಟಿತವಾಗಿ ಸಮಾಜದಲ್ಲಿ ಜೊತೆಜೊತೆಗೆ ಹೆಜ್ಜೆಇಡಬೇಕು. ಜಾತಿಗೆ ಸೀಮಿತವಾಗಿ ಕಾರ್ಯಕ್ರಮ ನಡೆಯೋ ಕಾಲಘಟ್ಟದಲ್ಲಿ , ಎಲ್ಲಾ ವರ್ಗದವರನ್ನು ಸೇರಿಸಿ ಇಂತಹ ಕಾರ್ಯಕ್ರಮದ ಆಯೋಜನೆ ಸಮಾಜಕ್ಕೆ ಮಾದರಿಯೆಂದು , ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಜುಲೈ 30 ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಹಾಗೂ ಯುವ ವೇದಿಕೆ ಇದರ ನೇತೃತ್ವದಲ್ಲಿ ಯುವ ವೇದಿಕೆ ಭಜನಾ ತಂಡ ಮತ್ತು ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಡನೆ ,ಆರ್ಯಾಪು ಗ್ರಾಮದ ಕೀರ್ತಿಶೇಷ ದಿ.ಕುಂಞಣ್ಣ ನಾಯ್ಕ ಇವರ ಮೇಲ್ಮಜಲು ಹಳೆಮನೆ ಗದ್ದೆಯಲ್ಲಿ ನಡೆದ “ಕಂಬುಳೊದ ಕಂಡೊಡ್ ಆಟಿದ ಐಸಿರಿ” ಶೀರ್ಷಿಕೆಯಡಿ , ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ,ಗುಂಪು ಸ್ಪರ್ಧೆಗಳ ಉದ್ಘಾಟನೆಯನ್ನು , ಚೆಂಡುಗಳನ್ನು ಕ್ರೀಡಾಪಟುಗಳಿಗೆ ಹಸ್ತಾಂತರಿಸೋ ಮೂಲಕ ಚಾಲನೆ ನೀಡಿ , ಬಳಿಕ ಮಾತನಾಡಿ ಅವರು ವಿಶ್ವ ಒಂದೇ , ರಾಷ್ಟ್ರ ಭಾರತ ಕಲ್ಪನೆ ಜೊತೆಗೆ ಸಮಾಜದ ಮುಂದೆ ಯಾವುದೇ ರೀತಿಯ ಸಂಕಟ ,ಸಂಘರ್ಷ ಬಂದರೂ ಕೂಡ ಜಗತ್ತಿಗೇ ನೇತೃತ್ವ ಕೊಡೋ ಶಕ್ತಿ ಭಾರತಕ್ಕೆ ಬರಲಿ ಹಾಗೂ ನೀವು ಮಾಡತಕ್ಕಂತಹ ಕಾರ್ಯದ ಜೊತೆಗೆ ನಾವಿರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿ ,ಯುವ ವೇದಿಕೆ ದಶಮಾನೋತ್ಸವ ವನ್ನು ಯಶಸ್ವಿಯಾಗಿ ಆಚರಿಸಿ ,ಧಾರ್ಮಿಕ ಆಚರಣೆ ಉಳಿಸೋ ಮೂಲಕ ನೂರಾರು ವರುಷಗಳ ಕಾಲ ಸಮಾಜಕ್ಕೆ ಗೌರವ ತರುವಂತಹ ಕೆಲಸ ಮಾಡಲಿಯೆಂದು ಹಾರೈಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ವಿಶ್ವನಾಥ ತೆಂಗಿನ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿ ,ಶುಭ ಹರಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಕೃಷ್ಣ ಬುಡಿಯಾರ್ ಮಾತನಾಡಿ , ಎಲ್ಲಾ ಸಮುದಾಯ ಬಾಂಧವರನ್ನೂ ಒಟ್ಟು ಗೂಡಿಸಿ ಕ್ರೀಡಾ ಕೂಟ ಅಯೋಜನೆ ಮಾಡಿರುವುದು ಸಂತಸ. ಸೋಲು ,ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕಾರ್ಯಕ್ರಮ ಎಲ್ಲಾ ಸಮಾಜಕ್ಕೂ ಮಾದರಿಯಾಗಲಿ ,ಅದೇ ರೀತಿ ಬಡ ಕುಟುಂಬಗಳಿಗೂ ವಿದ್ಯೆ ಒದಗಿಸೋ ಕಾರ್ಯವು ನಡೆಯಲಿಯೆಂದರು.

ಡಾ. ಸುರೇಶ್ ಪುತ್ತೂರಾಯ ಮಾತನಾಡಿ , ಬಹಳ ಖುಷಿಯಾಗಿದೆ ,ಮಕ್ಕಳು ,ಯುವಕರು ಪ್ರಾಚೀನ ಕೃಷಿ ಪದ್ಧತಿ ಯಿಂದ ದೂರವಾಗುವ ಕಾಲಘಟ್ಟದಲ್ಲಿ , ಮತ್ತೆ ಕೃಷಿ ಕಡೆ ಸೆಳೆಯಲು ಈ ಕಾರ್ಯಕ್ರಮ ಅರ್ಥಪೂರ್ಣ. ಅದೇ ರೀತಿ ಹಿಂದೂ ಸಮಾಜದ ಒಗ್ಗಟಿಗೂ ಕಾರಣವಾಗಿದ್ದು ,ವಿಶೇಷವಾಗಿ ಭಜನಾ ತಂಡದ ಕಾರ್ಯಗಳಿಗೆ ಅಬಿನಂದನೆ ಸಲ್ಲಿಸಿ ,ಹರಸಿದರು.
ಮಾಜಿ ತಾ.ಪಂ.ಅಧ್ಯಕ್ಷ ರಾಮಕೃಷ್ಣ ಬೋರ್ಕರ್ ಮಾತನಾಡಿ , ಮೊದಲು ಮರಾಟಿ ಭಾಷೆ ಮೂಲಕವೇ ಅಭಿನಂದನೆ ಸಲ್ಲಿಸಿದರು. ಕ್ರೀಡಾ ಕೂಟದಲ್ಲಿ ಭಾಗವಹಿಸುವಿಕೆಯೇ ಮುಖ್ಯ. ಯಾಕೆಂದರೆ, ಭಾಗವಹಿಸಿದ್ದಾಗ ಆಗುವ ತಪ್ಪಿನಿಂದ ಮುಂದೆ ಆ ತಪ್ಪುಗಳನ್ನು ಸರಿ ಪಡಿಸಿಕೊಳ್ಳಲೊಂದು ಅವಕಾಶ. ನಾಲ್ಕು ವರುಷದ ಹಿಂದೆಯೂ ಕೂಡ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಯೆಂದು ಹೇಳಿ ಹಾರೈಸಿದರು.


ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಮಾತನಾಡಿ , ನಾವಿಲ್ಲದೇ ಪರಿಸರ ಇದೆ ,ಆದರೆ ಪರಿಸರವಿಲ್ಲದೆ ನಾವಿರಲು ಅಸಾಧ್ಯ. ಇವತ್ತಿನ ಕಾಲಘಟ್ಟದಲ್ಲಿ ಯಾರು ಕೃಷಿಗೆ ಒತ್ತು ನೀಡುತ್ತಿಲ್ಲ ,ಇದರಿಂದ ಮುಂದೊಂದು ದಿನ ಆಹಾರ ಸಮಸ್ಯೆ ಯೂ ಕೂಡ ಎದುರಾಗಲಿದೆ. ಯಾವತ್ತೂ ಗದ್ದೆಗಳನ್ನೂ ಬದಿಗೆ ಸರಿಸೋ ಕಾರ್ಯವಾಗಬಾರದೆಂದು ಹೇಳಿದರು.ಇಂತಹ ಕ್ರೀಡಾಕೂಟದ ಮೂಲಕ ಗದ್ದೆಯೂ ಹದವಾಗಿ ,ಕೃಷಿಕಾರ್ಯಕ್ಕೆ ಅನುಕೂಲ ವಾಗುತ್ತದೆಯೆಂದರು.


ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಮಾತನಾಡಿ ,ಬಹಳ ಉತ್ತಮ ಕಾರ್ಯ ಮಾಡಿರುವಂತಹ ಮರಾಟಿ ಬಾಂಧವರಿಗೆ ವಂದಿಸುತ್ತಾ ಆಟಿ ತಿಂಗಳ ಮಹತ್ವ , ಆಹಾರ ಪದ್ಧತಿ , ಹಿರಿಯರು ಪಟ್ಟ ಕಷ್ಟ ಹಾಗೂ ಕೃಷಿ ಒತ್ತು ನೀಡುವಂತೆ ವಿನಂತಿಸಿ , ಮಾದರಿಯಾಗಲಿಯೆಂದರು.


ಕಾಂಗ್ರೆಸ್ ಎಸ್.ಟಿ.ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಮಾತನಾಡಿ, ಸುಮಾರು 9 ಹಿಂದೆ ರಚನೆಯಾದ ಈ ಸಂಘಟನೆಯೂ ,ಬೇರೆ ,ಬೇರೆ ,ಕಾರ್ಯಚಟುವಟಿಕೆ ಯಲ್ಲಿ ತೊಡಗಿರುವುದು ಸಂತಸ. ಒಳ್ಳೆಯ ರೀತಿಯ ಚಟುವಟಿಕೆ ನಡೆದಿದದ್ದು ,ಇದಕ್ಕೆಲ್ಲಾ ಮಾತೃ ಸಂಸ್ಥೆ ಪೂರಕವಾಗಿ ಬೆಂಬಲಿಸಲು ಸದಾ ಸಿದ್ಧ. ದಶಮಾನೋತ್ಸವ ಸಂಧರ್ಭ ಹೆಚ್ಚು ಕಾರ್ಯ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳಿ. ಯಾವುದೇ ಕಾರ್ಯವೂ ಮಾತೃ ಸಂಸ್ಥೆ ಮೂಲಕ ನಡೆದರೆ ಅತ್ಯುತ್ತಮ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತದೆ ಎಂದರು.


ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಸಂಚಾಲಕ ಶ್ರೀಧರ ನಾಯ್ಕ ಮಾತನಾಡಿ , ಯುವ ವೇದಿಕೆಯ ಪ್ರತಿ ಸದಸ್ಯ ನ ಯಶಸ್ಸು ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಕಾರಣವಾಗಿ ,ಜನಪರ ಕಾರ್ಯವಲ್ಲದೇ ಧಾರ್ಮಿಕ ಕಾರ್ಯ ಭಜನೆ ಮೂಲಕ 150 ಕ್ಕೂ ಮಿಕ್ಕಿ ಕಾರ್ಯಕ್ರಮ ,ರಕ್ತದಾನದಲ್ಲೂ ಅದ್ವಿತೀಯ ಸಾಧನೆ , ಇವೆಲ್ಲವೂ ಮುಂದಿನ ಪೀಳಿಗೆಗೂ ತಿಳಿಸೋ ಕಾರ್ಯವಾಗಲಿಯೆಂದರು.

ಸಭಾಧ್ಯಕ್ಷರಾದ ಮಂಜುನಾಥ ಎನ್.ಎಸ್. ಮಾತನಾಡಿ , ಇನ್ನೊಬ್ಬರನ್ನು ಬೆಳೆಸಿದರೆ ,ನಾವೂ ಕೂಡಾ ಬೆಳೆಯುತ್ತೇವೆ ಎಂಬ ತತ್ವ ,ಸಂದೇಶವನ್ನು ಮರಾಟಿ ಸಮಾಜ ಸಂಘವು ಸಾರುತ್ತದೆ. ಆ ಉದ್ದೇಶ ದಿಂದ ಯುವ ,ಮಹಿಳಾ ವೇದಿಕೆ ಆರಂಭ.ಇದಕ್ಕೆಲ್ಲಾ ಪೂರ್ಣ ಬೆಂಬಲವೇ ಮರಾಟಿ ಸಮಾಜದ ಬಂಧುಗಳು.ಮುಂದಿನ ದಿನಗಳಲ್ಲಿ ನಾವೂ ಕೂಡಾ ಒಂದೊಳ್ಳೆಯ ಸ್ಥಾನಮಾನ ಪಡೆದು , ನಮ್ಮವರಿಗೆ ಬೆಂಬಲವಾಗಿ ನಿಲ್ಲುವಂತಾಗಬೇಕು.ನಮ್ಮಲ್ಲೂ ಆಶೆ ,ಆಕಾಂಕ್ಷೆಗಳಿರಬೇಕು ,ಭಜನೆ ಮೂಲಕ ಸಮಾಜ ಜೋಡಣೆ ಕೆಲಸವಾಗಿದ್ದು , ಪ್ರಪ್ರಥಮ ಸಮಾಜ ಸೇವಾ ಸಂಘದ ಕೀರ್ತಿ ಯೂ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘಕ್ಕೆ ಸಲ್ಲುತ್ತದೆಯೆಂದು ಹೇಳಿ , ಎಲ್ಲಾ ರೀತಿಯ ಸಂಘಟನೆಗೂ ಬೆಂಬಲ ಬರಲಿಯೆಂದು ಹರಸಿದರು. ಹವಾಮಾನ ಇಲಾಖಾ ನಿವೃತ್ತ ಅಧಿಕಾರಿ ಸುಬ್ಬ ನಾಯ್ಕ , ಕ್ರೀಡಾಕೂಟದ ಅಧ್ಯಕ್ಷ ಗಂಗಾಧರ ನಾಯ್ಕ , ಸಂಚಾಲಕ ಆಶೋಕ ಸೊರಕೆ , ಯುವ ವೇದಿಕೆ ಅಧ್ಯಕ್ಷ ವೆಂಕಪ್ಪ ನಾಯ್ಕ , ಪ್ರ.ಕಾ. ವಿನೋದ್ ನಾಯ್ಕ , ಸಹ ಸಂಚಾಲಕ ಸಂದೀಪ್ , ಸಹಿತ ಹಲವರು ಇದ್ದರು. ಪದ್ಮಯ್ಯ ನಾಯ್ಕ ನೆಕ್ಕಿಲು ಕಾಯಿ ಒಡೆಯೋ ಮೂಲಕ ಕೆಸರುಗದ್ದೆ ಕ್ರೀಡೆಗೆ ಚಾಲನೆಕೊಟ್ಟರೆ , ದೀಪ ಪ್ರಜ್ವಲನೆ ಮೂಲಕ ಬಾಳಪ್ಪ ನಾಯ್ಕ ಕಿನ್ನಿಮಜಲು ಚಾಲನೆ ನೀಡಿದರು. ಯುವ ವೇದಿಕೆ ಗೌರವಧ್ಯಾಕ್ಷ ಗಿರೀಶ್ ನಾಯ್ಕ ಪ್ರಸ್ತಾವಿಕ ನುಡಿಗಳನ್ನಾಡಿದರು.ಕಾರ್ತಿಕ್ ಹಾಗೂ ಪೂರ್ಣಿಮಾ ಪ್ರಾರ್ಥನೆ ನೆರವೇರಿಸಿ , ಗಂಗಾಧರ್ ವಂದಿಸಿದರು.

ಸನ್ಮಾನ ಕಾರ್ಯಕ್ರಮ…
ಪ್ರಗತಿಪರ ಕೃಷಿಕ ಚೆನ್ನಪ್ಪ ನಾಯ್ಕ ಮೇಲ್ಮಜಲು ಹಾಗೂ ಅಂತರ್ ರಾಷ್ಟ್ರೀಯ ಯೋಗಾಪಟು ಕು.ತೃಪ್ತಿ ಮಾಡಾವು ಇವರುಗಳನ್ನು ಮರಾಟಿ ಸಮಾಜದ ವತಿಯಿಂದ ,ಬಾಂಧವರ ಪರವಾಗಿ ಸ್ಮರಣಿಕೆ ನೀಡಿ , ಅತಿಥಿಗಳ ಮೂಲಕ ಗೌರವಿಸಲಾಯಿತು. ಅದೇ ರೀತಿ ವೈದ್ಯ ,ನಾಟಿವೈದ್ಯೆ ,ಯಕ್ಷಗಾನ ರಂಗ ಸಹಿತ ಹಲವೂ ರೀತಿಯ ಸಾಧಕರಿಗೆ ಹಾಗೂ ವಿಶೇಷ ಆಹ್ವಾನಿತರಿಗೂ ಕೂಡಾ ವೇದಿಕೆ ಮುಂಭಾಗ ಶಾಲು ಹೊದಿಸಿ ,ಎಲ್ಲಾ ಸಂಘಟನೆಯ ಪರವಾಗಿ ಗೌರವಿಸಲಾಯಿತು. ಈ ಮಧ್ಯಯೇ ಕೆಸರು ಗದ್ದೆಯಲ್ಲಿ ಹಲವೂ ಬಗೆಯ ಆಟೋಟಾಗಳಲ್ಲಿ ಸಮುದಾಯ ದ ಮಕ್ಕಳು , ಯುವಕ -ಯುವತಿಯರೂ ಬಲೂ ಉತ್ಸಾಹ ದಿಂದಲೇ ಭಾಗವಹಿಸಿ , ಕೆಸರಿನಲ್ಲಿ ಮಿಂದೆದ್ದು, ಗೆದ್ದು , ಹಲವು ಬಹುಮಾನ ಗಳನ್ನೂ ಗಿಟ್ಟಿಸಿಕೊಳ್ಳೋ ಮೂಲಕ ಬೀಗಿದರು. ಇದನ್ನೇಲ್ಲಾ ಗದ್ದೆ ಸುತ್ತ ನಿಂತವರು ನೋಡಿ , ಆನಂದಿಸಿ , ಖುಷಿಪಟ್ಟು ಕೆಕೇ ಹಾಕಿ ಹಿಗ್ಗಿದರು. ಸಮುದಾಯ ಬಾಂಧವರ ಸಹಕಾರದ ಮುಖೇನ ಸವಿ-ಸವಿಯಾದ ತಿಂಡಿತಿನಿಸುಗಳು ಹಾಗೂ ಭೋಜನ ವ್ಯವಸ್ಥಯೂ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು. ಹಲವೂ ಸಮುದಾಯದವರು ಈ ಚೆಂದದ ಕಾರ್ಯಕ್ರಮದ ಸೊಗಸನ್ನು ಸವಿದು , ಉತ್ತಮ ರೀತಿಯಲ್ಲಿ ಸಹಕಾರ ನೀಡಿದರು. ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಿತು. ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಅಧ್ಯಕ್ಷ ಶೀನ ನಾಯ್ಕ ,ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಳಿಕ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮರಾಟಿ ಸಮುದಾಯ ಇದರ ವಿವಿಧ ಸಂಘಟನೆಯ ಪದಾಧಿಕಾರಿಗಳು ,ಸದಸ್ಯರು ,ಸಮಾಜ ಬಾಂಧವರು ,ಹಾಗೂ ಕ್ರೀಡಾ ಪ್ರೇಮಿಗಳು ಹಾಜರಿದ್ದರು.

ಕೆಸರಾಟದಿಂದ ರೋಗಗಳೂ ದೂರವಾಗುತ್ತದೆ – ಶಾಸಕ ಆಶೋಕ್ ರೈ
ಸಂಘಟನೆ ಮೂಲಕ ಅನೇಕಾನೇಕ ಪ್ರಯೋಜನಗಳಿವೆ.ಕೆಸರು ಮಣ್ಣಿನಲ್ಲಿ ಆಯುರ್ವೇದ ಮದ್ದಿನ ಶಕ್ತಿ ಯೂ ಅತ್ಯಾಧಿಕವಾಗಿದ್ದು ,ಇದು ಪ್ರಕೃತಿ ಚಿಕಿತ್ಸೆ ಗಿಂತಲೂ ಅತ್ಯುತ್ತಮವಾಗಿದ್ದು , ರೋಗಗಳ ಬಾರದಂತೆ ತಡೆಯಲು ಸಹಾಯಕ. ಮುಂದಿನ ದಿನಗಳಲ್ಲಿ ತುಳು ಭಾ಼ಷೆ ರಾಜ್ಯದ ಎರಡನೆಯ ಭಾ಼ಷೆಯೆಂಬ ಘೋಷಣೆ ಆಗುತ್ತದೆ.ಯಾವ ವಿಚಾರದಲ್ಲೂ ನಿಮ್ಮೊಂದಿಗೆ ನಾನು ಸದಾವಿರುತ್ತೇನೆ ಹಾಗೂ ಮಕ್ಕಳಿಗೂ ಪ್ರೋತ್ಸಾಹ ನೀಡಿ , ಅವರನ್ನೂ ವಿದ್ಯೆ ಮೂಲಕ ಮುಂದೆ ತನ್ನಿಯೆಂದು ಹೇಳಿದರು. ಕಾರ್ಯಕ್ರಮದ ನೇರ ಪ್ರಸಾರವೂ ದಿನವೀಡಿ ಸುದ್ದಿ ಯೂ ಟೂಬ್ ಚಾನೆಲ್ ಮೂಲಕ ನಡೆಯಿತು.

LEAVE A REPLY

Please enter your comment!
Please enter your name here