ಪುಣಚ: ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಪುಣಚ ಹಾಗೂ ಕೇಪು ಗ್ರಾ. ಪಂ. ಕೌಶಲ್ಯಾಭಿವೃಧ್ದಿ ಮತ್ತು ಉದ್ಯಮ ಶೀಲತೆ, ಜೀವನೋಪಾಯ ಖಾತೆ, ಇವುಗಳ ಸಹಭಾಗಿತ್ವದಲ್ಲಿ ನಿಸರ್ಗ ವನಧನ ವಿಕಾಸ ಕೇಂದ್ರದ ಉದ್ಘಾಟನೆ ಪುಣಚ ಗರಡಿ ಬಳಿಯ ಅಂಬೇಡ್ಕರ್ ಭವನದಲ್ಲಿ ಆ. 11 ರಂದು ನಡೆಯಿತು.
ಪುಣಚ ಗ್ರಾ.ಪಂ ಅಧ್ಯಕ್ಷ ರಾಮಕೃಷ್ಣ ಬಿ. ರಿಬ್ಬನ್ ಕತ್ತರಿಸಿ ದೀಪ ಬೆಳಗಿಸಿ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಗ್ರಾಮದಲ್ಲಿ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮ ಶೀಲತೆ, ಜೀವನೋಪಾಯ ಖಾತೆ ಉಧ್ದೀಪನಗೊಂಡಿರುವುದು ಸಂತಸದ ವಿಷಯ ಎಂದು ಹೇಳಿ ಶುಭ ಹಾರೈಸಿದರು. ಪುಣಚ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ರವಿ, ಜಿಲ್ಲಾ ವೃತ್ತಿಪರ ಅಭಿಯಾನ ಕೇಂದ್ರದ ಸಿಬ್ಬಂದಿ ವಿನೀತ್, ತಾ. ಪಂ.ಅಭಿಯಾನ ಘಟಕದ ವ್ಯವಸ್ಥಾಪಕಿ ಸುಧಾ, ಪುಣಚ ನಿಸರ್ಗ ವನಧನ ವಿಕಾಸ ಕೇಂದ್ರದ ಅಧ್ಯಕ್ಷೆ ಮಾಲತಿ ಎನ್, ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಪುಣಚ ಗ್ರಾ.ಪ. ಉಪಾಧ್ಯಕೆ ಪ್ರತಿಭಾ ಜಗನ್ನಾಥ್, ತಾ. ಪಂ.ಅಭಿಯಾನ ಕೇಂದ್ರದ ವ್ಯವಸ್ಥಾಪಕ ಪ್ರದೀಪ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಣಚ ಗ್ರಾ.ಪಂ ಸದಸ್ಯರು, ಪುಣಚ ಹಾಗೂ ಕೇಪು ನಿಸರ್ಗ ವನಧನ ವಿಕಾಸ ಕೇಂದ್ರದ ಸದಸ್ಯರು, ಸಂಜೀವಿನಿ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.
ಸುಮಿತ್ರಾ ಗರಡಿ ಪ್ರಾರ್ಥಿಸಿದರು. ಸುಮನಾ ಸ್ವಾಗತಿಸಿ, ಮೀನಾಕ್ಷಿ ವಂದಿಸಿದರು. ಕುಸುಮ ಕಾರ್ಯಕ್ರಮ ನಿರೂಪಿಸಿದರು.