ಪಡ್ನೂರು: ತೋಟಗಾರಿಕೆ ದಿನಾಚರಣೆ ಪ್ರಯುಕ್ತ ತಾಳೆ ಬೆಳೆ ನಾಟಿ ಆಂದೋಲನ

0

ಪುತ್ತೂರು: ತೋಟಗಾರಿಕೆ ಇಲಾಖೆ, ಜಿ.ಪಂ. ಪುತ್ತೂರು, ಗ್ರಾ. ಪಂ ಬನ್ನೂರು ಮತ್ತು 3ಎಫ್ ಆಯಿಲ್ ಪಾಮ್ ಕಂಪನಿ ಲಿ. ರವರ ಸಹಭಾಗಿತ್ವದಲ್ಲಿ ಜಿಲ್ಲಾವಲಯ 2023-24ನೇ ಸಾಲಿನ ಪ್ರಚಾರ ಸಾಹಿತ್ಯ ಯೋಜನೆಯಡಿ ತೋಟಗಾರಿಕೆ ದಿನಾಚರಣೆ ಅಂಗವಾಗಿ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮ ಆ.12ರಂದು ಪಡ್ನೂರು, ಪರಂಗಾಜೆ ಅವಿನಾಶ್ ಜೈನ್‌ರವರ ತಾಳೆಬೆಳೆ ತಾಕುವಿನಲ್ಲಿ ನಡೆಯಿತು.
ಬನ್ನೂರು ಗ್ರಾಮ ಪಂಚಾಯತು ಅಧ್ಯಕ್ಷೆ ಜಯಾರವರು ತಾಳೆಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬನ್ನೂರು ಗ್ರಾಮ ಪಂಚಾಯತು ಅಧ್ಯಕ್ಷೆ ಜಯಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಅಶೋಕ ಕುಮಾರ್ ರೈ ಮಾತನಾಡಿ ಶುಭ ಹಾರೈಸಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ ಎ.ರವರು ಪ್ರಾಸ್ತಾವಿಕ ಮಾತನಾಡಿ ತಾಳೆ ಬೆಳೆಯ ವಿಚಾರಗಳನ್ನು ಮಂಡಿಸಿ ತರಬೇತಿಯ ಮಹತ್ವ ವಿವರಿಸಿದರು. ದರು. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಪದ್ಮನಾಭ ಕೊಂಕೋಡಿ ನಿರ್ದೇಶಕ ಭಾರತಿ ತಾಳೆ ಎಣ್ಣೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ನಿರ್ದೇಶಕ ಯೋಗೀಶ ಭಟ್, ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್, ೩ಎಫ್ ಆಯಿಲ್ ಪಾಮ್ ಕಂಪನಿಯ ಮೋಹನ್ ರಾಜ್, ಪುತ್ತೂರು ತಾಲೂಕು ಪಂಚಾಯತು ಓಖಐಒ ಜಗತ್ ಉಪಸ್ಥಿತರಿದ್ದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ ತಾಳೆ ಕಾರ್ಯಕ್ರಮ ನಿರೂಪಿಸಿ ಹಾಗೂ ಬೇಸಾಯ ಕ್ರಮಗಳ ಕುರಿತು ತರಬೇತಿ ನೀಡಿದರು. ಅವಿನಾಶ್ ಜೈನ್ ಪರಂಗಾಜೆ ತಾಳೆಬೆಳೆಯ ಕುರಿತ ಅನುಭವಗಳನ್ನು ತಿಳಿಸಿದರು.

LEAVE A REPLY

Please enter your comment!
Please enter your name here