ಈಶ್ವರಮಂಗಲ: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಸಾಹಿತ್ಯ ಕಾರ್ಯಾಗಾರ

0

ಪುತ್ತೂರು: ಮೆದುಳಿಗೆ ನಾವು ಕೊಡುವ ಸಂದೇಶ ಹಾಗೂ ಆಲೋಚನೆಯ ಮೇಲೆ ಮೆದುಳಿನ ಸಾಮರ್ಥ್ಯ ನಿಂತಿದೆ. ಒಳಗಿರುವ ಕಸವನ್ನು ಹೊರಗೆ ಹಾಕಿ ಗುರಿಯ ಊಹೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಯಾಗಾರದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಅಪೂರ್ವ ಕಾರಂತ್ ಹೇಳಿದರು. ಈಶ್ವರಮಂಗಲ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸಾಹಿತ್ಯ ರಚನೆ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾರ್ಯಾಗಾರದಲ್ಲಿ 6,7ನೇ ತರಗತಿಯ ಒಟ್ಟು 84 ಮಕ್ಕಳು ಭಾಗವಹಿಸಿದ್ದರು. ಸಕಾರಾತ್ಮಕ ಊಹೆಯನ್ನು ಮಾಡಿಕೊಳ್ಳುವ ಉಪಯೋಗ, ಕ್ರಿಸ್ಟಲ್ ಬಾಲ್ ಪವರ್ ಟೆಕ್ನಿಕ್, ಓದಿನ ವಿಧಾನ, ಪರೀಕ್ಷಾ ಭಯ ಹೋಗಲಾಡಿಸುವಿಕೆ, ಸ್ಮರಣ ಶಕ್ತಿ ವಿಷಯಗಳ ಕುರಿತು ಮಾತನಾಡಿ ಅನೇಕ ಪ್ರಶ್ನೆಗಳ ಮೂಲಕ ಕಾರ್ಯಾಗಾರದಲ್ಲಿ ಮಕ್ಕಳನ್ನು ತೊಡಗಿಸಿದರು. 18 ಮಕ್ಕಳ ಬಹಳ ಚೆನ್ನಾಗಿ ಚುಟುಕು ರಚಿಸಿದರು. ಶಾಲಾ ಮುಖ್ಯಗುರು ನರೇಂದ್ರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here