ಆಲಂಕಾರು: ರಾಮಕುಂಜ ಗ್ರಾಮ ಪಂಚಾಯತ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಸುಚೇತಾ ಹಾಗೂ ಉಪಾಧ್ಯಕ್ಷರಾಗಿ ಕೇಶವ ಗಾಂಧಿಪೇಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
16 ಸದಸ್ಯ ಬಲದ ರಾಮಕುಂಜ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ 13 ಸದಸ್ಯರಿದ್ದಾರೆ.ಕಾಂಗ್ರೆಸ್ ಬೆಂಬಲಿತ 2 ಸದಸ್ಯರು, ಎಸ್.ಡಿ.ಪಿ.ಐ ಬೆಂಬಲಿತ 1 ಸದಸ್ಯರಿದ್ದು ಒಟ್ಟು 16 ಜನ ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಸ್ಥಾನದಿಂದ ಹಳೇನೆರೆಂಕಿ ಗ್ರಾಮದ 2 ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ
ಸುಚೇತಾ ಆಯ್ಕೆಯಾಗಿದ್ದಾರೆ.ಇವರು ಹಳೇನೆರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿಯಾಗಿದ್ದಾರೆ. ಹಾಗೂ ಅನುಸೂಚಿತ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಮಕುಂಜ 4 ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಕೇಶವ ಗಾಂಧಿಪೇಟೆ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವರ ಅವಿರೋಧ ಆಯ್ಕೆ ನಡೆದಿದೆ.
ಸದಸ್ಯರಾದ ಪ್ರಶಾಂತ ಆರ್.ಕೆ,ಸೂರಪ್ಪ ಕುಲಾಲ್,ಪ್ರದೀಪ್,ಕುಶಾಲಪ್ಪ,ವಸಂತ,ಭವಾನಿ,ರೋಹಿಣಿ,ಭಾರತಿ,ಜಯಶ್ರೀ,ಮಾಲತಿ,ಸುಜಾತ,ಕಾಂಗ್ರೆಸ್ ಬೆಂಬಲಿತ ಯತೀಶ್,ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಸವಣೂರು ಸರಕಾರಿ ಪ.ಪೂ.ಕಾಲೇಜ್ ನ ಉಪನ್ಯಾಸಕರಾದ ವಿಧ್ಯಾದರ ರೈ ಚುನಾವಣಾಧಿಕಾರಿ ಯಾಗಿದ್ದರು. ಪಿಡಿಒ ಲಲಿತಾ ಜಿ.ಡಿ ಹಾಗು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರಿಂದ ಅಭಿನಂದನೆ: ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಚೇತಾ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕೇಶವ ಗಾಂಧಿಪೇಟೆ ಅವರನ್ನು ಸುಳ್ಯಮಂಡಲ ಬಿ.ಜೆ.ಪಿ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ, ಸುಬೋದ್ ಶೆಟ್ಟಿ ಮೇನಾಲ,ಮಂಡಳ ಉಪಾಧ್ಯಕ್ಷರಾದ ಜಯಂತಿ ಆರ್.ಗೌಡ, ಬಿ.ಜೆ.ಪಿ ಜಿಲ್ಲಾ ಸಮಿತಿ ಸದಸ್ಯ ಲಕ್ಷೀ೬ ನಾರಾಯಣ ರಾವ್,ಸುಳ್ಯಮಂಡಲ,ವೃತ್ತಿಪರ ಪ್ರಕೋಷ್ಠ ಸಂಚಾಲಕರಾದ ಸದಾಶಿವ ಶೆಟ್ಟಿ ಮಾರಂಗ,ಮಂಡಲ ಸಮಿತಿ ಸದಸ್ಯರಾದ ಹೇಮಾಮೋಹನದಾಸ ಶೆಟ್ಟಿ ,ಶೇಖರ ಹಿರಿಂಜ
ಕೊಯಿಲ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಗೌಡ ದೇಂತಾರು,ಹಳೇನೆರೆಂಕಿ ಶಕ್ತಿ ಕೇಂದ್ರದ ಪ್ರಮುಖ ಜನಾರ್ಧನ ಕದ್ರ,ಸಹಪ್ರಮುಖ ಕೊರಗಪ್ಪ ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷರಾದ ಮಹೇಶ್,ಮೋಹನ ಕೆ.ಟಿ,ಉಮೇಶ, ಕಾರ್ಯದರ್ಶಿ ನಾಣ್ಯಪ್ಪ.ಕೆ,ರಮೇಶ ಸಂಪ್ಯಾಡಿ,ದಾಮೋದರ ಸಂಪ್ಯಾಡಿ,ಅವಿನಾಶ್ ಮರಂಕಾಡಿ ಸೇರಿದಂತೆ ಅನೇಕ ಮಂದಿ ಅಭಿನಂದನೆ ಸಲ್ಲಿಸಿದರು.