ಖಾತೆ ಬದಲಾವಣೆಗೆ ರೂ.5000 ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ದಾಳಿ

0

ಅರಂತೋಡು ಗ್ರಾಮ ಆಡಳಿತಾಧಿಕಾರಿ ಮೀಯಾಸಾಬ್ ಮುಲ್ಲಾ ಬಂಧನ

ಪುತ್ತೂರು: ಖಾತೆ ಬದಲಾವಣೆಗಾಗಿ ಎನ್‌ಒಸಿ ನೀಡಲು ಲಂಚ ಪಡೆಯುತ್ತಿರುವ ವೇಳೆ ಕಾರ್ಯಾಚರಣೆ ನಡೆಸಿ ಲೋಕಾಯುಕ್ತ ಪೊಲೀಸರು ಗ್ರಾಮ ಅಡಳಿತಾಧಿಕಾರಿ ಮಿಯಸಾಬ್ ಮುಲ್ಲ ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡುನಲ್ಲಿ ನಡೆದಿದೆ.


ಸುಳ್ಯ ಅರಂತೋಡು ಗ್ರಾಮದ ಅಡ್ಡಲೆ ಕೂಸಪ್ಪ ಗೌಡರ ಪುತ್ರ ಹರಿಪ್ರಸಾದ್‌ರವರು, ತನ್ನ ತಂದೆಯ ಮರಣಾ ನಂತರ ತನ್ನ ತಾಯಿ ಮತ್ತು ಅಕ್ಕನ ಹೆಸರಿನಲ್ಲಿದ್ದ ಜಂಟಿ ಖಾತೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಸಲು ಹರಿಪ್ರಸಾದ್ ಮಾ.5ರಂದು ಅರಂತೋಡು ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದಾಗ, ಕಡತವು ಸುಳ್ಯ ಉಪನೊಂದಾಣಾಧಿಕಾರಿಯವರ ಕಚೇರಿಯಿಂದ ಕಂದಾಯ ಇಲಾಖೆಯ ಭೂಮಿ ಕೇಂದ್ರಕ್ಕೆ ಪಹಣಿಯಲ್ಲಿ ಕಂಡು ಬರುವ ಸರ್ಕಾರಿ ನಿಬಂಧನೆಗಳನ್ನು ವಜಾಗೊಳಿಸುವ ಕಡತ ಬಂದಿರುವುದಿಲ್ಲ ಎಂದು ತಿಳಿಸಿದ್ದರು.


ಜು.24ರಂದು ಸುಳ್ಯ ತಾಲೂಕು ಕಚೇರಿಗೆ ಹೋಗಿದ್ದ ಹರಿಪ್ರಸಾದ್ ಅಲ್ಲಿ ಅರಂತೋಡು ಗ್ರಾಮದ ಗ್ರಾಮಕರಣಿಕರಲ್ಲಿ ತನ್ನ ಕಡತದ ಬಗ್ಗೆ ಮಾತನಾಡಿದಾಗ ನಿಮ್ಮ ಕಡತವು ಬಂದಿರುತ್ತದೆ ಎಂದು ಅವರು ತಿಳಿಸಿದ್ದರು. ತನಗೆ ಎನ್‌ಒಸಿ ಯಾವಾಗ ಸಿಗಬಹುದು ಎಂದು ಹರಿಪ್ರಸಾದ್ ಕೇಳಿದಾಗ ಗ್ರಾಮ ಕರಣಿಕರು ಸ್ವಲ್ಪ ಖರ್ಚಿದೆ, ಖರ್ಚು ಮಾಡುವುದಾದರೆ ನಾನು ಮಾಡಿಕೊಡುತ್ತೇನೆ’ ಎಂದು ಗ್ರಾಮ ಆಡಳಿತಾಧಿಕಾರಿ ತಿಳಿಸಿದರು. ಅದಕ್ಕೆ ಅದಕ್ಕೆ ಅವರು ಎಷ್ಟು ಖರ್ಚು ಆಗಬಹುದು ಎಂದು ಕೇಳಿದಾಗ ಗ್ರಾಮಕರಣಿಕರುಎಂಟರಿಂದ ಒಂಭತ್ತು ಸಾವಿರ ಖರ್ಚಾಗಬಹುದು’ ಎಂದು ತಿಳಿಸಿದರು. ಅಷ್ಟು ಹಣ ಇಲ್ಲ ಎಂದು ಹರಿಪ್ರಸಾದ್ ಹೇಳಿದಾಗ, ಅದಕ್ಕೆ ನೀವೇ ಹೋದರೆ ನಿಮಗೆ ಅದಕ್ಕಿಂತ ಜಾಸ್ತಿ ಖರ್ಚು ಆಗಬಹುದು ಮತ್ತು ಎನ್‌ಒಸಿ ಸಿಗುವಾಗ ಒಂದು ವರ್ಷ ಆಗಬಹುದು ಎಂದು ಗ್ರಾಮಕರಣಿಕರು ತಿಳಿಸಿದರು. ನನಗೆ ಅರ್ಜೆಂಟ್ ಇದೆ, ಬ್ಯಾಂಕ್ ಲೋನ್ ತೆಗೆಯಲು ಹಕ್ಕು ಖುಲಾಸೆ ಆಗಿ ಬರಬೇಕಾದರೆ ಎನ್‌ಓಸಿ ಬೇಕು, ಮಾಡಿ ಕೊಡಿ ಎಂದು ಹರಿಪ್ರಸಾದ್ ಹೇಳಿದಾಗ ಗ್ರ್ರಾಮ ಕರಣಿಕರು ‘ನಿಮ್ಮಲ್ಲಿ ಇದ್ದಷ್ಟು ಕೊಡಿ, ಉಳಿದ ಹಣವನ್ನು ಒಮ್ಮೆಗೆ ನಾನು ಕೊಡುತ್ತೇನೆ, ಮತ್ತೆ ನೀವು ನನಗೆ ಕೊಡಿ’ ಹೇಳಿದ್ದು ಅದರಂತೆ ಹರಿಪ್ರಸಾದ್ ರೂ.3000ವನ್ನು ಮುಂಗಡವಾಗಿ ಗ್ರಾಮಕರಣಿಕರಲ್ಲಿ ನೀಡಿದರು.


ಇದಾದ ಬಳಿಕ ಆ.17ರಂದು ಆರಂತೋಡು ಗ್ರಾಮದ ವಿಎ ಕಚೇರಿಗೆ ಹೋಗಿ ಎನ್.ಓ.ಸಿ ವಿಚಾರವಾಗಿ ಅಲ್ಲಿನ ಗ್ರಾಮಕರಣಿಕ ಮಿಯಾಸಾಬ್ ಮುಲ್ಲಾರವರಲ್ಲಿ ವಿಚಾರಿಸಿದಾಗ ಅವರು ರೂ.5000 ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.


ಈ ಹರಿಪ್ರಸಾದ್‌ರವರು ಲೋಕಾಯುಕ್ತರಿಗೆ ನೀಡಿದ್ದ ದೂರಿನಂತೆ ಕಾರ್ಯಾಚರಣೆ ನಡೆಸಿದೆ ಲೋಕಾಯುಕ್ತ ಪೊಲೀಸರು ಗ್ರಾಮಕರಣಿಕರಾದ ಮೀಯಾಸಾಬ್ ಮುಲ್ಲಾ ಹರಿಪ್ರಸಾದ್‌ರವರಿಂದ ರೂ.5000ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಲೋಕಾಯುಕ್ತ ಅಧೀಕ್ಷಕ ಸಿ.ಎ. ಸೈಮನ್‌ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಕಲಾವತಿ.ಕೆ, ಚಲುವರಾಜು, ಬಿ., ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಹಾಗೂ ಸಿಬ್ಬಂದಿಗಳ ಜೊತೆ ಟ್ರ್ಯಾಪ್, ಕಾರ್ಯಾಚರಣೆ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here