ಆಲಂಕಾರು: ಆಲಂಕಾರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷರಾದ ಸುಶೀಲಾ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಆಲಂಕಾರು ಪೇಟೆಯಲ್ಲಿರುವ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದಿಂದ ಆಲಂಕಾರು ಸಿ.ಎ ಬ್ಯಾಂಕ್ ನ ಮುಂಭಾಗದಲ್ಲಿರುವ ವೃತ್ತದ ತನಕ ವಾಹನ ಸವಾರರು ರಸ್ತೆಯ ಎರಡು ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಕೆ.ಎಸ್.ಆರ್.ಟಿ.ಸಿ ಬಸ್ಸು ಸೇರಿ ಇನ್ನೀತರ ವಾಹನಗಳ ಸಂಚಾರಕ್ಕೆ ತೊಡಕ್ಕಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಗ್ರಾ.ಪಂ ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸಲು ಪೋಲಿಸ್ ಇಲಾಖೆಗೆ ಬರೆಯುವುದಾಗಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆಲಂಕಾರು ಗ್ರಾಮದಲ್ಲಿ ಸ್ವಚ್ಚತೆಗೆ ಅಧ್ಯತೆ:
ಆಲಂಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಅಧ್ಯತೆ ನೀಡುತ್ತಿದ್ದು, ಈ ಬಗ್ಗೆ ಗ್ರಾ.ಪಂ ಅಧ್ಯಕ್ಷರಾದ ಸುಶೀಲಾ ರವರ ನೇತೃತ್ವದಲ್ಲಿ ಸಂಜೀವಿನಿ ಒಕ್ಕೋಟದ ಪದಾಧಿಕಾರಿಗಳ ಸಭೆ ಕರೆದು ಸ್ವಚ್ಚತೆಗೆ ಅದ್ಯತೆ ನೀಡುವ ಬಗ್ಗೆ ಸಭೆ ಕರೆಯಲು ನಿರ್ಣಯಿಸಲಾಯಿತು.
ಹೆಚ್ಚುವರಿ ಬಸ್ಸು ಅಳವಡಿಸಲು ನಿರ್ಣಯ:
ಕಡಬ, ಆಲಂಕಾರು, ಕುದ್ಮಾರು ಸವಣೂರು, ಪುತ್ತೂರಿಗೆ ಬೆಳಗ್ಗಿನ ಸಮಯದಲ್ಲಿ ಶಾಲಾ ಮಕ್ಕಳು ಬಸ್ಸಿನಲ್ಲಿ ನೇತಾಡಿಕೊಂಡು ಹರಸಾಹಸ ಮಾಡಿಕೊಂಡು ಶಾಲಾ ಮಕ್ಕಳು ಹಾಗು ಸಾರ್ವಜನಿಕರು ಒಡಾಟ ನಡೆಸುತ್ತಿದ್ದು ಬೆಳಿಗ್ಗೆ ಹಾಗು ಸಂಜೆಯ ಸಮಯದಲ್ಲಿ ಹೆಚ್ಚುವರಿ ಬಸ್ಸು ಅಳವಡಿಸುವಂತೆ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯರಾದ ಸದಾನಂದ ಆಚಾರ್ಯ ಪ್ರಸ್ತಾಪಿಸಿದ್ದು ಈ ಬಗ್ಗೆ ಎಲ್ಲಾ ಗ್ರಾ.ಪಂ ಸದಸ್ಯರು ಸಹಮತ ವ್ಯಕ್ತಪಡಿಸಿದ್ದು ಈ ಬಗ್ಗೆ ಹೆಚ್ಚುವರಿ ಬಸ್ಸು ಅಳವಡಿಸುವಂತೆ ಶಾಸಕರಿಗೆ ಹಾಗು ಇಲಾಖೆಗೆ ಬರೆಯುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಗಳಾದ ಸಾಮಾಜಿಕ ನ್ಯಾಯ ಸಮಿತಿ, ಹಣಕಾಸು ಲೆಕ್ಕ ಪರಿಶೋಧನ ಯೋಜನಾ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿಗಳ ಪದಾದಿಕಾರಿಗಳನ್ನು ಅಡಳಿತ ಮಂಡಳಿ ಯ ಅಧ್ಯಕ್ಷ ಹಾಗು ಉಪಾಧ್ಯಕ್ಷರು ಬದಲಾವಣೆ ಆದ ಹಿನ್ನೆಲೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಹಾಗು ಸೆ.8 ರಂದು ಆಲಂಕಾರು ಗ್ರಾ.ಪಂ ನ ಜಮಾಬಂಧಿ ಮಾಡುವುದೆಂದು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಸರಕಾರದಿಂದ ಬಂದ ಸುತ್ತೋಲೆಯನ್ನು ಸಭೆಗೆ ತಿಳಿಸಿದರು. ಕಾರ್ಯದರ್ಶಿ ವಸಂತ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.ಗ್ರಾ.ಪಂ ಉಪಾಧ್ಯಕ್ಷರಾದ
ರವಿ ಪೂಜಾರಿ.ಕೆ ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತಾಕುಮಾರ್, ಚಂದ್ರಶೇಖರ, ಕೃಷ್ಣ ಗಾಣಂತಿ, ವಾರಿಜಾ, ಸುಮತಿ, ಸುನಂದಾ, ಶಾರದ, ರೂಪಾಶ್ರೀ,
ಉಪಸ್ಥಿತರಿದ್ದು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಯ ಬಗ್ಗೆ ಚರ್ಚೆ ನಡೆದು, ವಿವಿಧ ಸಲಹೆ ಸೂಚನೆ ನೀಡಿದರು. ಸಿಬ್ಬಂದಿಗಳಾದ ಕರಿಯಪ್ಪ, ಹೇಮಾವತಿ.ಕೆ, ವಸಂತ .ಜಿ., ಮೋನಪ್ಪ, ಭವ್ಯಕುಮಾರಿ, ಸುಶ್ಮೀತಾ, ಕಮಲಾ ಸಹಕರಿಸಿದರು.