ಬನ್ನೂರು ಕೃಷ್ಣನಗರ ಎವಿಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ. 5 ರಂದು “ಶಿಕ್ಷಕರ ದಿನಾಚರಣೆ ” ಆಚರಿಸಲಾಯಿತು.
ರಾಜ್ಯ ಪ್ರಶಸ್ತಿ ವಿಜೇತ ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾದ ಕುಮಾರಿ ಅರುಣ ಡಿ.ಮುಖ್ಯ ಅತಿಥಿಯಾಗಿ ಆಗಮಿಸಿ ಶಿಕ್ಷಕರಿಗೆ ಶೈಕ್ಷಣಿಕ ಮೌಲ್ಯಗಳನ್ನು ತಿಳಿಸಿಕೊಟ್ಟು ಮುಂದೆ ಈ ಒಂದು ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕಿಯಾದ ರುಕ್ಮಿಣಿ ಡಿ, ನಗರಸಭೆ ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು‌.

ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ ಇವರು ಶಾಲೆಯ ಉನ್ನತಿ ಕುರಿತು ಮಾತುಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಸಭಾಧ್ಯಕ್ಷತೆ ವಹಿಸಿದ್ದರು‌. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಚಿ ವನಿತಾ ಎ.ವಿ. ಅತಿಥಿಯನ್ನು ಪರಿಚಯಿಸಿದರು. ಸಂಸ್ಥೆಯ ನಿರ್ದೇಶಕರಾದ ಡಾ.ಅನುಪಮಾ, ರಾಮಣ್ಣ ಗೌಡ ಹಲಂಗ, ಗಂಗಾಧರ ಗೌಡ ಎ.ವಿ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಎನ್ , ಸದಸ್ಯರಾದ ಮಾಲಿನಿ, ಹರ್ಷಿತ , ಪೋಷಕರು, ಉಪಸ್ಥಿತರಿದ್ದರು ಸಂಸ್ಥೆಯ ಸಹಾಯಕ ನಾರಾಯಣ ಕುಲಾಲ್ , ಭುವನೇಶ್ವರಿ, ಪುಟಾಣಿ ಮಕ್ಕಳು ಸಹಕರಿಸಿದರು. ಶಾಲೆಯ ಪುಟಾಣಿಯರಾದ ನಿಷ್ಕಾ, ತನಿಷ್ಕ ಮತ್ತು ಕೃತಿನ್ ಪ್ರಾರ್ಥಿಸಿದರು ಸಂಸ್ಥೆಯ ಶಿಕ್ಷಕಿ ಯಶುಭ ರೈ ಇವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು , ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಸ್ವಾಗತಿಸಿದರು, ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು, ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here