ಸೆ. 10: ಬೆಟ್ಟಂಪಾಡಿ ಗಣೇಶೋತ್ಸವದ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 38 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಸೆ. 10 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.ಬೆಳಿಗ್ಗೆ ಬೆಟ್ಟಂಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಂದರ್ ನಾಯಕ್ ಬಾಳೆಗುಳಿ ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ಗೌರವ ಉಪಸ್ಥಿತಿ ಇರಲಿದ್ದಾರೆ.


ಸ್ಪರ್ಧೆಗಳು
ಕ್ರೀಡಾ ಸ್ಪರ್ಧೆಗಳ ಅಂಗವಾಗಿ ಸಾರ್ವಜನಿಕ ಯುವಕ ಯುವತಿಯರಿಗೆ ಹಗ್ಗ ಎಳೆಯುವುದು, ಲಕ್ಕಿ ಗೇಮ್ ಹಾಗೂ ಗುಂಡೆಸೆತ ಸ್ಪರ್ಧೆ ನಡೆಯಲಿದೆ.
ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ಅಂಗನವಾಡಿ ಮಕ್ಕಳಿಗೆ ಅಭಿನಯ ಗೀತೆ, 1-4 : ಭಕ್ತಿಗೀತೆ, 5-7 : ಭಕ್ತಿಗೀತೆ ಮತ್ತು ಧಾರ್ಮಿಕ ರಸಪ್ರಶ್ನೆ, 8-10: ಭಕ್ತಿಗೀತೆ, ಗಣೇಶ ಸ್ವಾಮಿಯ ವರ್ಣಚಿತ್ರ ರಚನೆ ಮತ್ತು ಧಾರ್ಮಿಕ ರಸಪ್ರಶ್ನೆ, ಯುವಕರಿಗೆ ಭಕ್ತಿಗೀತೆ, ಯುವತಿಯರಿಗೆ ಭಕ್ತಿಗೀತೆ ಮತ್ತು ಸಂಗೀತ ಕುರ್ಚಿ, ಕಿರಿಯರಿಗೆ ಆಶುನಟನೆ ಮತ್ತು ಛದ್ಮವೇಷ ಸ್ಪರ್ಧೆ, ಸಾರ್ವಜನಿಕ ವಿಭಾಗದಲ್ಲಿ ಆಶುನಟನೆ ಸ್ಪರ್ಧೆ ನಡೆಯಲಿದೆ. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here