ಉಪ್ಪಿನಂಗಡಿ: ಸಂಗಮ ಕ್ಷೇತ್ರ ವೀಕ್ಷಿಸಿದ ಸಚಿವರು-ಕನಸಿನ ಯೋಜನೆ ವಿವರಿಸಿದ ಶಾಸಕರು

0

ಉಪ್ಪಿನಂಗಡಿ: ಬಿಳಿಯೂರಿನ ಕಿಂಡಿ ಅಣೆಕಟ್ಟು ವೀಕ್ಷಣೆಗೆಂದು ಬಂದಿದ್ದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯ ಮೇರೆಗೆ ಉಪ್ಪಿನಂಗಡಿಯ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಶಾಸಕರು ಉಪ್ಪಿನಂಗಡಿಯನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ತನ್ನ ಕನಸಿನ ಯೋಜನೆಯನ್ನು ಸಚಿವರಿಗೆ ವಿವರಿಸಿದರು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಗೆ ಭೇಟಿ ನೀಡಿದ ಸಚಿವರನ್ನು ದೇವಾಲಯದ ವತಿಯಿಂದ ಶಾಲು ಹೊದೆಸಿ, ಗೌರವಿಸಲಾಯಿತು. ಬಳಿಕ ಕುಮಾರಧಾರ- ನೇತ್ರಾವತಿ ನದಿಗಳ ಸಂಗಮ ಸ್ಥಳವನ್ನು ಸಚಿವರಿಗೆ ತೋರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಕೂಡಲ ಸಂಗಮದಂತೆ ಇಲ್ಲಿ ಕೂಡಾ ಸಂಗಮ ಕ್ಷೇತ್ರವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಯೋಜನೆಯ ಬಗ್ಗೆಗಿನ ತನ್ನ ಕನಸನ್ನು ವಿವರಿಸಿ, ಇದಕ್ಕೆ ಅಗತ್ಯ ಅನುದಾನ ಒದಗಿಸಿಕೊಡುವಂತೆ ಮನವಿ ಮಾಡಿದರು.


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಮಾಜಿ ಸದಸ್ಯ ರಾಧಾಕೃಷ್ಣ ನಾಕ್, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ಎಂ., ಸಿಬ್ಬಂದಿ ಕೃಷ್ಣಪ್ರಸಾದ್, ದಿವಾಕರ, ಕಾಂಗ್ರೆಸ್ ಪ್ರಮುಖರಾದ ಡಾ. ರಘು, ಮುರಳೀಧರ ರೈ, ಅನಿ ಮಿನೇಜಸ್, ರೂಪೇಶ್ ರೈ ಅಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here