ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ ಚುನಾವಣೆ- ಎಬಿವಿಪಿಗೆ ಗೆಲುವು

0

ಅರುಣ್ ಪುತ್ತಿಲ ಭೇಟಿ-ರಕ್ಷೆ ಕಟ್ಟಿ ಅಭಿನಂದನೆ

ಪುತ್ತೂರು: ದರ್ಬೆ ಸಂತ ಪಿಲೋಮಿನಾ ಕಾಲೇಜಿನಲ್ಲಿ ಸೆ.9ರಂದು ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ಗೆಲುವು ಸಾಧಿಸುವ ಮೂಲಕ ಹಲವು ವರ್ಷಗಳ ನಂತರ ಎಬಿವಿಪಿ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾಗಿದ್ದಾರೆ.


ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಎಬಿವಿಪಿಯ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಬಿವಿಪಿಯ ವಿಪಿನ್ ಗೌಡ ಹಾಗೂ ಎನ್‌ಯುಐನ ಮಹಮ್ಮದ್ ಫರ್ವಿಝ್ ಮಧ್ಯೆ ನಡೆದ ಸ್ಫರ್ಧೆಯಲ್ಲಿ ಎಬಿವಿಪಿಯ ವಿಪಿನ್ ಗೌಡ ಗೆಲುವು ಸಾಧಿಸಿದ್ದಾರೆ.


ಕಾರ್ಯದರ್ಶಿ ಸ್ಥಾನಕ್ಕೆ ಎಬಿಪಿಯ ಸಮೃದ್ಧಿ ಶೆಣೈ ಹಗೂ ಎನ್‌ಎಸ್‌ಯುಐನ ಮಹಮ್ಮದ್ ಅಕ್ತಾರ್ ಮಧ್ಯೆ ನಡೆದ ಚುನಾವಣೆಯಲ್ಲಿ ಎಬಿವಿಪಿಯ ಸಮೃಷ್ಧಿ ಶೆಣೈ ಗೆಲುವು ಸಾಧಿಸಿದ್ದಾರೆ. ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಎಬಿವಿಪಿಯ ರಕ್ಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಪುತ್ತಿಲ ಭೇಟಿ-ಅಭಿನಂದನೆ
ಎಬಿವಿಪಿ ವಿದ್ಯಾರ್ಥಿಗಳು ಗೆಲವು ಸಾಧಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾಲೇಜಿನ ಬಳಿ ಭೇಟಿ ನೀಡಿ ಗೆಲುವು ಸಾಧಿಸಿದ ಮೂವರು ವಿದ್ಯಾರ್ಥಿಗಳಿಗೆ ರಕ್ಷೆ ಕಟ್ಟಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here