ಉಪ್ಪಿನಂಗಡಿ: ಕರಾಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉಪ್ಪಿನಂಗಡಿ ಬಳಿಯ ವಿದ್ಯಾನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ ಜ್ಞಾನಭಾರತಿ ಶಾಲೆಯ ವಿದ್ಯಾರ್ಥಿಗಳಾದ ಶನುಂ (ಅರೇಬಿಕ್ ಧಾರ್ಮಿಕ ಪಠಣ ಹಾಗೂ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ), ಅನೀಶಾ (ಕನ್ನಡ ಕಂಠಪಾಠದಲ್ಲಿ ಪ್ರಥಮ, ಮರ್ಝೀಯಾ (ಲಘು ಸಂಗೀತದಲ್ಲಿ ದ್ವಿತೀಯ), ಅಯಾನ್ (ಕ್ಲೇ ಮಾಡೆಲಿಂಗ್‌ನಲ್ಲಿ ದ್ವಿತೀಯ), ನಬರುಸ್ತ (ಚಿತ್ರಕಲೆಯಲ್ಲಿ ದ್ವಿತೀಯ) ಹಾಗೂ ಕಿರಿಯರ ವಿಭಾಗದಲ್ಲಿ ಮೊಹಮ್ಮದ್ ಅಮೀನ್ (ಆಶುಭಾಷಣದಲ್ಲಿ ಪ್ರಥಮ), ರೈಫಾ (ಅಭಿನಯ ಗೀತೆಯಲ್ಲಿ ದ್ವಿತೀಯ), ಮುಂಝೀರ್ (ಚಿತ್ರಕಲೆಯಲ್ಲಿ ದ್ವಿತೀಯ), ಅಯಾನ್ (ಸಂಗೀತದಲ್ಲಿ ತೃತೀಯ) ಹಾಗೂ ರುಫೈದಾ ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ವಿದ್ಯಾಸಂಸ್ಥೆಯ ಪ್ರಕಟನೆ ತಿಳಿಸಿದೆ.