ಅ.5ರಂದು ಕೈಗೆಟಕುವ ವೈಭವ ಡೈಮಂಡ್ ಫೆಸ್ಟ್‌ಗೆ ಕೊನೆಯ ದಿನ
ಪುತ್ತೂರು: ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಆಯೋಜಿಸಲಾದ ವಜ್ರಾಭರಣಗಳ ಮಾರಾಟ ಪ್ರದರ್ಶನ “ಡೈಮಂಡ್ ಫೆಸ್ಟ್” ಸೆ.18ರಂದು ಆರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ ವಜ್ರಾಭರಣಗಳನ್ನು ಬಿಡುಗಡೆಗೊಳಿಸಿ ಫೆಸ್ಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮುಳಿಯ ಜ್ಯುವೆಲ್ಸ್ ನಲ್ಲಿ ವಜ್ರಾಭರಣಗಳ ವಿಶೇಷ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಅಚ್ಚುಮೆಚ್ಚಿನ ವಜ್ರದ ಆಭರಣಗಳನ್ನು ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ರಿಯಾಯಿತಿ ದರದಲ್ಲಿ ವಜ್ರಗಳ ಆಭರಣ ಖರೀದಿಸಬಹುದು. ವೇದಾಂತ್ ಮತ್ತು ಕಿಸ್ನ ಎಂಬ ಎರಡು ವಿಧದ ಆಭರಣಗಳು ಫೆಸ್ಟ್‌ನಲ್ಲಿದೆ. ಗ್ರಾಹಕರು ಈ ಫೆಸ್ಟ್‌ನೊಂದಿಗೆ ಪಾಲ್ಗೊಳ್ಳಿ ಎಂದರು.
ಮುಳಿಯ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮಾತನಾಡಿ ವಜ್ರಾದಪಿ ಕಠೋರಾನಿ ಎಂಬ ಮಾತಿನಂತೆ ವಜ್ರ ಕಾಠಿಣ್ಯತೆಯನ್ನು ಹೊಂದಿದ ವಸ್ತು. ವಜ್ರಾಭರಣ ಧರಿಸಿದ ಮಹಿಳೆ ವಜ್ರದ ಮೌಲ್ಯವನ್ನು ತನ್ನಲ್ಲಿ ಪ್ರತಿಬಿಂಬಿಸುತ್ತಾಳೆ. ಮಿಷನ್ ತಂತ್ರಜ್ಞಾನದಲ್ಲಿಯೂ ವಜ್ರವನ್ನು ಬಳಸಲಾಗುತ್ತದೆ. ಆಭರಣ ಚಿನ್ನ, ವಜ್ರಗಳ ಆಭರಣ ಖರೀದಿಗೆ ಪ್ರತೀ ಸಮಯವೂ ಸಕಾಲವಾಗಿದೆ. ವಜ್ರವನ್ನು ಯಾರೂ ಕೂಡ ಖರೀದಿಸಬಹುದು ಎಂದು ಹೇಳಿದರು.
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕ ಮಾತನಾಡಿ ಕಳೆದ ಕೆಲವು ವರುಷಗಳಿಂದ ಮುಳಿಯ ಡೈಮಂಡ್ ಫೆಸ್ಟ್ ಆಯೋಜಿಸಲಾಗುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ಹಾಗೆ ಫೆಸ್ಟ್ ಮಾಡಲಾಗಿದೆ. ಇದು ಕೈಗೆಟುಕುವ ವೈಭವವಾಗಿದೆ. ಇಲ್ಲಿ ಎಲ್ಲರಿಗೂ ವಜ್ರವನ್ನು ಖರೀದಿಸುವ ಅವಕಾಶಗಳಿವೆ. ಮಿತದರದಲ್ಲಿ ವಜ್ರಾಭರಣ ಪಡೆಯಬಹುದು. ವಜ್ರದ ಆಭರಣಕ್ಕೆ ಕೂಡ ಮಾರುಕಟ್ಟೆ ದರದ ಪ್ರಕಾರ ವಿನಿಮಯ ಆಫರ್ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದರು.
ಫ್ರಥಮ ಖರೀದಿ:
ಡೈಮಂಡ್ ಫೆಸ್ಟ್‌ನಲ್ಲಿ ಆರಂಭದ ದಿನವೇ ಗ್ರಾಹಕರಾದ ಗಣೇಶ್ ಮತ್ತು ಸವಿತಾ ಕೇದಗಡಿ ದಂಪತಿ ವಜ್ರಾಭರಣ ಖರೀದಿ ಮಾಡಿದರು. ಈ ಮೂಲಕ ಈ ಫೆಸ್ಟ್‌ನ ಪ್ರಥಮ ಖರೀದಿದಾರರಾದರು.
ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಉಪಸ್ಥಿತರಿದ್ದರು. ಸಿಬಂದಿ ಸಂದೇಶ್ ಪ್ರಾರ್ಥಿಸಿದರು. ಶೋರೂಮ್ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಪ್ರವಿಣ ಕಾರ್ಯಕ್ರಮ ನಿರೂಪಿಸಿದರು. ಸ್ಟೋರ್ ಮ್ಯಾನೇಜರ್ ಯತೀಶ್ ವಂದಿಸಿದರು.
ವಜ್ರದ ಉಂಗುರ ಗೆಲ್ಲುವ ಅವಕಾಶ
ಡೈಮಂಡ್ ಫೆಸ್ಟ್ ಮಾರಾಟ ಮತ್ತು ಪ್ರದರ್ಶನದಲ್ಲಿ ವಜ್ರಾಭರಣಗಳ ಅಮೋಘ ಸಂಗ್ರಹವಿದೆ. ವೇದಾಂತ್ ಎನ್ನುವ ವಜ್ರದ ಆಭರಣಗಳು, ಅಮೂಲ್ಯ ಡೈಮಂಡ್ ಹಾಗೂ ಕಿಸ್ನ ಡೈಮಂಡ್‌ಗಳು ಲಭ್ಯವಿದೆ. ಉಂಗುರಗಳು, ನೆಕ್ಲೆಸ್‌ಗಳು, ಕಿವಿಯೋಲೆಗಳನ್ನು ಅತ್ಯಲ್ಪ ದರದಲ್ಲಿ ಪಡೆದುಕೊಳ್ಳಬಹುದು. ಖರೀದಿಯಲ್ಲಿ ವಜ್ರದ ಉಂಗುರ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ನಿಮ್ಮ ಹಳೆಯ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳಿಗೆ ವಿನಿಮಯ ಮಾಡಿ ಪ್ರತೀ ಗ್ರಾಂ ಮೇಲೆ 100 ರೂ ಅಧಿಕ ಪಡೆಯಬಹುದು. ಶೇ.95 ದರದವರಗೆ ವಿನಿಮಯ, ಶೇ.90ರಷ್ಟು ಬೈಬ್ಯಾಕ್ ದೊರೆಯುತ್ತದೆ. ಎಲ್ಲಾ ಆಭರಣ ಪ್ರಿಯರು ಫೆಸ್ಟ್‌ಗೆ ಭೇಟಿ ನೀಡಿ. ಮಾರಾಟ ಪ್ರದರ್ಶನವನ್ನು ಯಶಸ್ವಿಗೊಳಿಸಿ.
ನಾಮದೇವ ಮಲ್ಯ
ಶೋರೂಮ್ ಮ್ಯಾನೇಜರ್