ಕಬಕ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಸೆ.16 ರಂದು ನಡೆಯಿತು. ಪಂದ್ಯಾಟವನ್ನು ಕಬಕ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸುಶೀಲ ಇವರು ಉದ್ಘಾಟಿಸಿದರು.ವೇದಿಕೆಯಲ್ಲಿ ಕಬಕ ಗ್ರಾಮ ಪಂಚಾಯತ್ ನ ಉಪಾದ್ಯಕ್ಷೆ ಗೀತಾ ,ನಝೀರ್ ,ಕಬಕ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮಹಮ್ಮದ್ ಕಬಕ ಕಾರ್ಸ್ ,ರಶೀದ್ ಮುರ , ಆದಂ ಕೆದುವಡ್ಕ, ರಮೇಶ್ ನಲಿಕೆ , ಗುಲಾಬಿ ದೇವಸ್ಯ , ಹಮೀದ್ , ಅಶ್ರಫ್ , ಸುಮ , ಪದ್ಮಾವತಿ .ತಾಲೂಕು ಕ್ರೀಡಾ ಸಂಯೋಜಕ ಪುನೀತ್ ,ಕಬಕ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಸುರೇಖಾ ,ಕಬಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೇಮಲತಾ ಎಂ ಉಪಸ್ಥಿತರಿದ್ದರು.
ತ್ರೋಬಾಲ್ ಪಂದ್ಯಾಟಕ್ಕೆ ತೀರ್ಪುಗಾರರಾಗಿ ಮೋನಪ್ಪ ಪಟ್ಟೆ, ಕೃಷ್ಣಯ್ಯ ,ಪ್ರವೀಣ ರೈ ಪಾಪೆಮಜಲು, ಚಂದ್ರಕಲಾ,ಪೂರ್ಣಿಮ,ನಂದ ಕುಮಾರ ,ಗೋಪಿನಾಥ್ ,ಶ್ವೇತಾ, ಗೀತಾಂಜಲಿ ,ಎಲಿಜಬೆತ್ ,ಕೀರ್ತನ್ ಇವರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಬಕ ಕಾಲೇಜಿನ ಕಾರ್ಯಾಧ್ಯಕ್ಷ ಶಾಬಾ ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಶ್ರೀಧರ ರೈ .ಕೆ ಸ್ವಾಗತಿಸಿದರು. ಉಪನ್ಯಾಸಕಿ ವನಿತಾ ವಂದಿಸಿ, ಕಾಲೇಜಿನ ಕ್ರೀಡಾ ಸಂಯೋಜಕಿ ನಯನಕುಮಾರಿ ಸ್ಮರಣಿಕೆಯನ್ನು ವಿತರಿಸಿದರು .ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ವಿವಿಧ ವಿವಿದ ಪದವಿಪೂರ್ವ ಕಾಲೇಜಿನಿಂದ ಒಟ್ಟು 23 ತಂಡಗಳು ಭಾಗವಹಿಸಿದವು. ಬಾಲಕರ ವಿಭಾಗದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಥಮ ಮತ್ತು ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಹಾಗೂ ಸೈಂಟ್ ಫಿಲೋಮಿನಾ ದ್ವಿತೀಯ ಸ್ಥಾನವನ್ನು ಪಡೆಯಿತು.
ಅಪರಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀಧರ ರೈ .ಕೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅಶ್ವಿತಾ ಸ್ವಾಗತಿಸಿದರು. ಕುಮಾರಿ ಕವನ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಉಪನ್ಯಾಸಕರಾದ ಸುಶ್ಮಿತಾ,ಸ್ವಾತಿ ,ಉಷಾ ಮತ್ತು ಬೋಧಕೇತರ ಸಿಬ್ಬಂದಿ ಮಮತಾ ಸಹಕಾರವನ್ನು ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದರು.