ಪುತ್ತೂರು: ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದ್ದು ಶಾಸಕ ಅಶೋಕ್ ರೈ ನೇತೃತ್ವದ ನಿಯೋಗ ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಿದರು.
ತುಳುನಾಡಿನ ಜನಪದ ಕಲೆಯಾದ ಕಂಬಳವು ಈ ಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು ಬೆಂಗಳೂರು ಜನತೆ ಸೇರಿದಂತೆ ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳ ಜನತೆ, ವಿದೇಶಿಯರು ಈ ಬಾರಿ ಕಂಬಳವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಂಬಳ ಉಳಿವಿಗಾಗಿ ಸುಪ್ರಿಂಕೋರ್ಟು ಮೆಟ್ಟಿಲೇರಿ ಯಸಶ್ವಿಯಾದ ಅಶೋಕ್ ರೈಗಳು ಈ ಬಾರಿ ರಾಜ್ಯದ ರಾಜಧಾನಿಯಲ್ಲೇ ಕಂಬಳವನ್ನು ಆಯೋಜನೆ ಮಾಡುವ ಮೂಲಕ ತುಳುನಾಡಿನ ಜನಪದ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.
ಕಂಬಳದ ಕರೆ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ವಾರ ಕರೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷ ಸುಂದರ್ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಎಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್ಕುಮಾರ್ ರೈ, ರಾಕೇಶ್ ರೈ ಕುದ್ಕಾಡಿ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ, ದೀಕ್ಷಿತ್ ರಐ ಮೊದಲಾದವರು ಉಪಸ್ಥಿತರಿದ್ದರು.