ವಲಯ ಮಟ್ಟದ ಕ್ರೀಡಾಕೂಟ-ವಿವೇಕಾನಂದ ಆ. ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ಪುತ್ತೂರು: ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟವು ಅಕ್ಟೋಬರ್  3 ಮತ್ತು 4 ರಂದು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆದಿದ್ದು,  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ನಿಧಿಶ್ರೀ ಕೆ 7ನೇ ತರಗತಿ 100 ಮೀಟರ್  ಪ್ರಥಮ, ಉದ್ದ ಜಿಗಿತ ಪ್ರಥಮ. ಶ್ರೀರಕ್ಷಾ ಕೆ 7ನೇ ತರಗತಿ 200 ಮೀಟರ್ ಪ್ರಥಮ, 600 ಮೀಟರ್ ದ್ವಿತೀಯ. ಕ್ಷಮಾ ಜೆ ರೈ 7 ನೇ ತರಗತಿ 400 ಮೀಟರ್ ಪ್ರಥಮ, ಎತ್ತರ ಜಿಗಿತ ದ್ವಿತೀಯ. ತನ್ವಿ ಬಿ ವಿ 7ನೇ ತರಗತಿ ಎತ್ತರ ಜಿಗಿತ ಪ್ರಥಮ. ಸಾನ್ವಿ ಜೆ 7ನೇ ತರಗತಿ ಶಾಟ್ ಪುಟ್ ಪ್ರಥಮ, ಚಕ್ರ ಎಸೆತ ಪ್ರಥಮ. ಆತ್ಮೀ ಕೆ ಎಲ್ 100 ಮೀಟರ್ ದ್ವಿತೀಯ, 200 ಮೀಟರ್ ತೃತೀಯ. ವಂಶಿತಾ ಎಂ 6ನೇ ತರಗತಿ ಉದ್ದ ಜಿಗಿತ ದ್ವಿತೀಯ. ನಿಷ್ಮ 7 ನೇ ತರಗತಿ ಶಾಟ್ ಪುಟ್  ತೃತೀಯ ಹಾಗೂ ಪ್ರಾಥಮಿಕ ವಿಭಾಗದ ಬಾಲಕಿಯರ ರಿಲೇ ತಂಡ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಮತ್ತು ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯು ಪಡೆದಿರುತ್ತದೆ. ಈ ವಿಭಾಗದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಇಬ್ಬರು ವಿದ್ಯಾರ್ಥಿನಿಯಾರಾದ ನಿಧಿ ಶ್ರಿ ಕೆ ಮತ್ತು ಸಾನ್ವಿ ಜೆ ರೈ ಪಡೆದುಕೊಂಡಿರುತ್ತಾರೆ .

 ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಧನುಷ್ ಪಿ ಡಿ 7ನೇ ತರಗತಿ 400 ಮೀಟರ್ ಪ್ರಥಮ. ಕಿಶನ್ ಬಿ ಕೆ 7ನೇ ತರಗತಿ 400 ಮೀಟರ್ ತೃತಿಯ, 600 ಮೀಟರ್ ತೃತೀಯ. ವೈಭವ್ ಕಾಮತ್ 100 ಮೀಟರ್ ದ್ವಿತೀಯ, 200 ಮೀಟರ್ ಪ್ರಥಮ ಹಾಗೂ ಲಾಂಗ್ ಜಂಪ್ ಪ್ರಥಮ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ರಿಲೇ ತಂಡವು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಪ್ರಾಥಮಿಕ ಶಾಲಾಬಾಲಕರ ವಿಭಾಗದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯು ಪಡೆದುಕೊಂಡಿರುತ್ತದೆ.

LEAVE A REPLY

Please enter your comment!
Please enter your name here