ಪುತ್ತೂರು: ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿಯಲ್ಲಿ ಅ.7ರಂದು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಧನ್ವಿ ಎ.ಎಂ 200 ಮೀಟರ್, 400 ಮೀಟರ್, ಹಾಗೂ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾಳೆ.
7ನೇ ತರಗತಿ ವಿದ್ಯಾರ್ಥಿನಿ ಶಾರ್ವಿ.ರೈ ಪ್ರಾಥಮಿಕ ವಿಭಾಗದ ಬಾಲಕಿಯರ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಪ್ರಾಥಮಿಕ ಬಾಲಕರ ವಿಭಾಗದ 200 ಮೀಟರ್ ಓಟದಲ್ಲಿ ಲಿಖಿತ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. 17ರ ವಯೋಮಾನದ ಬಾಲಕಿಯರ 4100 ಮೀಟರ್ ರಿಲೇಯಲ್ಲಿ ದಿಯಾ ರೈ,ಶ್ರದ್ಧಾ, ಕುಶ್ಮಿತಾ, ಅನ್ವಿತಾ ರೈ ತೃತೀಯ ಸ್ಥಾನ ಪಡೆದು, 14ರ ವಯೋಮಾನದ ಬಾಲಕಿಯರ 4*100 ಮೀಟರ್ ರಿಲೇಯಲ್ಲಿ ವೃಷ್ಠಿ ರೈ, ಧನ್ವಿ. ಎ. ಎಂ,ಸಾಕ್ಷ್ಯ, ಪ್ರಣೀತ, ತೃತೀಯ ಸ್ಥಾನ ಪಡೆದಿರುತ್ತಾರೆ. 17ರ ವಯೋಮಾನದ ಬಾಲಕರ ವಿಭಾಗದ ಎತ್ತರ ಜಿಗಿತದಲ್ಲಿ ಮನೀಶ್ ರೈ. ಎಸ್. ಕೆ 10ನೇ ತರಗತಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ. ಹಾಗೂ 14ರ ವಯೋಮಾನದ ಬಾಲಕಿಯರ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕಿಯರಾದ ಮಮತಾ ಹಾಗೂ ಪೂಜಾ ಇವರಿಂದ ತರಬೇತಿ ಪಡೆದುಕೊಂಡಿರುತ್ತಾರೆ.