ಮಾಧ್ಯಮಗಳಲ್ಲಿ ಬಂದಂತೆ ಯಾವುದೇ ನಿರ್ಧಾರ ನಡೆದಿಲ್ಲ- ಕಾರ್ಯಕರ್ತರೇ ನನ್ನ ಶಕ್ತಿ-ಪುತ್ತಿಲ ಸ್ಪಷ್ಟನೆ

0

ಪಕ್ಷನಿಷ್ಠ ಪ್ರಾಮಾಣಿಕ ಕಾರ್ಯಕರ್ತರ ಗಮನಕ್ಕೆ ತರದೆ ಯಾವುದೇ ತೀರ್ಮಾನವನ್ನು ಬಿಜೆಪಿ ತೆಗೆದುಕೊಳ್ಳುವುದಿಲ್ಲ – ನವೀನ್ ಕುಮಾರ್ ರೈ ಪನಡ್ಕ ಕೈಕಾರ

ಪುತ್ತೂರು: ನನ್ನ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನ ಕಾರ್ಯಕರ್ತರ ಅಭಿಪ್ರಾಯದಂತೆ ತೆಗೆದು ಕೊಳ್ಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಬಂದಂತೆ ಯಾವುದೇ ರೀತಿಯ ನಿರ್ಧಾರವೂ ನಡೆದಿಲ್ಲ ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ‘ಪುತ್ತಿಲ ಪರಿವಾರ’ ವಾಟ್ಸಾಪ್ ಗ್ರೂಪ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕರ್ತರ ಒತ್ತಾಯದಂತೆ 2023ರ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸಿದ್ದೆ. ನನ್ನ ಮುಂದಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನ ಶಕ್ತಿ ಹಾಗೂ ಹಿತೈಷಿಗಳಾದ ಕಾರ್ಯರ್ತರ ಜೊತೆ ಮಾತುಕತೆ ನಡೆಸಿ ಅವರ ಇಚ್ಚೆಯಂತೆ ಮುಂದಿನ ಹೆಜ್ಜೆ ಇಡುತ್ತೇನೆ. ಯಾವುದೇ ಗೊಂದಲಗಳಿಗೂ ಕಿವಿಗೊಡಬೇಡಿ ಎಂದು ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.

ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಇಂದಿನ ದಿನಪತ್ರಿಕೆಯ ವರದಿ ಭಾರತೀಯ ಜನತಾ ಪಕ್ಷದ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ನವೀನ್ ಕುಮಾರ್ ರೈ ಪನಡ್ಕ ಕೈಕಾರ ಅವರ ಹೆಸರಿನಲ್ಲಿ ‘ಮೋದಿ ಪರವಾರ’ ವಾಟ್ಸಪ್ ಗ್ರೂಪ್‌ನಲ್ಲಿ ಪತ್ರಿಕೆಯ ವರದಿಯ ಚಿತ್ರವನ್ನು ಇರಿಸಿ ಸ್ಪಷನೆ ನೀಡಲಾಗಿದೆ. ಇಲ್ಲಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ, ಮತದಾರರ ಭಾವನೆಗಳನ್ನು ಅವಲೋಕಿಸಿ ಸೇರ್ಪಡೆಯ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವಾಗುತ್ತದೆ. ಪಕ್ಷವು ಪಕ್ಷನಿಷ್ಠ ಪ್ರಾಮಾಣಿಕ ಕಾರ್ಯಕರ್ತರ ಗಮನಕ್ಕೆ ತರದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಇದು ನಮ್ಮ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ. ಇವತ್ತಿನ ಪತ್ರಿಕಾ ವರದಿಗೆ ಸಂಬಂಧಿಸಿ ಭಾರತೀಯ ಜನತಾ ಪಕ್ಷದ ಜವಾಬ್ದಾರಿಯುತ ನಾಯಕರಗಳಲ್ಲಿ ವರದಿಯ ಬಗ್ಗೆ ಮಾತನಾಡಿ ಸಾರ್ವಜನಿಕವಾಗಿ ತಿಳಿಸುತ್ತಿದ್ದೇನೆ ಎಂದು ನವೀನ್ ಕುಮಾರ್ ರೈ ಪನಡ್ಕ ಕೈಕಾರ ಅವರು ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here