ರೋಟರಿ ಕ್ಲಬ್ ಪುತ್ತೂರು ಪೂರ್ವದಿಂದ ಮುಂಡೂರು ಶಾಲೆಗೆ ಲ್ಯಾಪ್‌ಟಾಪ್ ಕೊಡುಗೆ

0

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ಪ್ರತಿಭಾನ್ವಿತ ಶಿಕ್ಷಕರಿದ್ದಾರೆ. ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದರ ಮೂಲಕ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಕಾರ ನೀಡಬೇಕು ಎಂದು ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ವತಿಯಿಂದ ಲ್ಯಾಪ್‌ಟಾಪ್‌ನ್ನು ಕೊಡುಗೆಯಾಗಿ ಹಸ್ತಾಂತರ ಮಾಡಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣುರವರು ಶಾಲೆಗೆ ಕೊಡುಗೆ ನೀಡಿದ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಟರಿ ಫೌಂಡೇಶನ್ ಚೇರ್ಮನ್ ಡಾ.ಸೂರ್ಯನಾರಾಯಣ, ಅಸಿಸ್ಟೆಂಟ್ ಗವರ್ನರ್ ರೋಟರಿ ಜಿಲ್ಲೆ 3181 ಪುರಂದರ್ ರೈ, ಸಿ ಎ ಬ್ಯಾಂಕ್ ಮಂಡೂರು ಇದರ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ, ಶಿವರಾಮ್ ಆಳ್ವ ಕುರಿಯ, ರೋಟರಿ ಪುತ್ತೂರು ಪೂರ್ವ ಇದರ ಕಾರ್ಯದರ್ಶಿ ರವಿಕುಮಾರ್, ಕೋಶಾಧಿಕಾರಿ ಶಶಿಧರ ಹಾಗೂ ಶಶಿಕಾಂತ್ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯರಾದ ವೆಂಕಟೇಶ್ ಅಯ್ಯರ್ ಸಹಕಾರದಿಂದ ಕಿರಣ Sanctum technology ಕೋರಮಂಗಲ ಬೆಂಗಳೂರು ಇವರು ಕೊಡುಗೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಶಾಲಾಮುಖ್ಯಗುರು ವಿಜಯ ಪಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ರಾಮಚಂದ್ರ ಗೌಡ ವಂದಿಸಿದರು. ಸಹ ಶಿಕ್ಷಕ ಅಬ್ದುಲ್ ಬಶೀರ್ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here