ಪುತ್ತೂರು: ಇತಿಹಾಸ ಪ್ರಸಿದ್ಧ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅ.15 ರಂದು ವಾರ್ಷಿಕ ನವರಾತ್ರಿ ಪೂಜೆಯು ಸಂಭ್ರಮದಿಂದ ಪ್ರಾರಂಭವಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಿಂದ ತೆನೆ ಮುಹೂರ್ತದ ಮೂಲಕ ಅಮ್ಮನವರ ಗದ್ದುಗೆ ಏರಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕರಾದ ಸಂಜೀವ ಮೇಸ್ತ್ರಿ ಬಪ್ಪಳಿಗೆ, ಸಂಜೀವ ನೆಲ್ಲಿಗುಂಡಿ, ಬೊಮ್ಮಣ್ಣ ನೆಲ್ಲಿಗುಂಡಿ, ಭಾಸ್ಕರ ನೆಲ್ಲಿಗುಂಡಿ, ಜಗದೀಶ್ ಬಪ್ಪಳಿಗೆ, ಲೋಕೇಶ್ ದರ್ಖಾಸ್, ನಾರಾಯಣ ಹಾರಾಡಿ ರಾಜೇಶ್ ಬಪ್ಪಳಿಗೆ ಸುರೇಶ್ ಮೆಲ್ಕಾರ್ ಮತ್ತು ಸಮಸ್ತ ಭಕ್ತರು ಉಪಸ್ಥಿತರಿದ್ದರು.
ವಿ.ಸೂ: ನವರಾತ್ರಿಯ ಪ್ರತಿ ದಿನವು ರಾತ್ರಿ ಭಜನೆ ಮತ್ತು ಮಹಾಪೂಜೆ ನಡೆಯುತ್ತದೆ.