ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ಸದಸ್ಯರಿಂದ ನವರಾತ್ರಿ ಪ್ರಯುಕ್ತ 18 ದೇವಿ ದೇಗುಲಗಳ ದರ್ಶನ

0

ಪುತ್ತೂರು: ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ಸದಸ್ಯರು ಅ.19ರಂದು ಲಲಿತ ಪಂಚಮಿಯ ವಿಶೇಷ ದಿನದಂದು ಪುರುಷರಕಟ್ಟೆ ಮಹಿಳಾ ಭಜನಾ ತಂಡದ ಸಹಕಾರದೊಂದಿಗೆ, ಎಂ ಎಂ ಟೂರಿಸ್ಟ್ ಸಂಚಾಲಕಿ ಮಮತಾ ಆನಂದ್ ಲಿಖಿತ ಕಲಾ ಆರ್ಟ್ಸ್ ಅವರ ನೇತೃತ್ವದಲ್ಲಿ ಸುಮಾರು 18 ದೇವಿ ದೇಗುಲಗಳ ದರ್ಶನ ಪಡೆದು ಕೃತಾರ್ಥರಾದರು. ಈ ಪ್ರಯಾಣವು ಬೆಳಿಗ್ಗೆ 4:30 ಕ್ಕೆ ಪುರುಷರಕಟ್ಟೆಯಿಂದ ಹೊರಟು ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಬಿಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಅಂಬಿಕಾ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ , ಕನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ, ಜಯ ಜನಾರ್ಧನ ದೇವಸ್ಥಾನ ಅಂಬಲ್ಪಾಡಿ, ಮಹಾಕಾಳಿ ದೇವಸ್ಥಾನ ಅಂಬಲ್ಪಾಡಿ, ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಲಕ್ಷ್ಮಿ ಹೊನ್ನಮ್ಮ ದೇವಸ್ಥಾನ ಸಿದ್ದಾಪುರ, ಶ್ರೀಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹೀಗೆ 18 ದೇವಿ ದೇಗುಲಗಳ ದರ್ಶನ ಪಡೆದು, ಅವುಗಳ ಪ್ರತೀತಿ , ಹಿನ್ನೆಲೆಯನ್ನು ತಿಳಿದುಕೊಂಡು ಭಾವುಕರಾದರು . ಈ ಯಾತ್ರೆಗೆ ಶ್ರೀ ಗೌರಿ ಮಹಿಳಾ ಮಂಡಲದ ಗೌರವಾಧ್ಯಕ್ಷೆಯಾಗಿರುವ ನಿವೃತ್ತ ಶಿಕ್ಷಕಿ ರತ್ನಾವತಿ ಎಸ್ ಡಿ, ಅಧ್ಯಕ್ಷೆಯಾಗಿರುವ ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಭಕ್ತಕೋಡಿ, ಗೌರವ ಸಲಹೆಗಾರರಾಗಿರುವ ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮಿ ಮತ್ತು ತಂಡದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here