ಪುತ್ತೂರು: ಕಡಬ ತಾಲೂಕಿನ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಗಜಲಕ್ಷ್ಮಿ ಪೂಜೆ ನಡೆಯಿತು. ಅರ್ಚಕರು ಯಶಸ್ವಿಗೆ ಹಣ್ಣು ಹಂಪಲು ತೆಂಗಿನಕಾಯಿ,ಅವಲಕ್ಕಿ, ಹೊದ್ಲು, ಬೆಲ್ಲ, ಇತ್ಯಾದಿ ತಿನಿಸುಗಳನ್ನು ನೀಡಿದರು. ವೈಧಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಗಜಲಕ್ಷ್ಮಿಗೆ ಮಂಗಳಾರತಿ ಬೆಳಗಿದರು. ದೀಪಾವಳಿ ಮತ್ತು ನವರಾತ್ರಿಯ ವಿಶೇಷ ದಿನ ಸೇರಿದಂತೆ ವರ್ಷಕ್ಕೆ ಎರಡು ಬಾರಿ ಶ್ರೀ ದೇವಳದಲ್ಲಿ ಗಜಪೂಜೆ ನೆರವೇರುತ್ತದೆ.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.