ಪುತ್ತೂರು ದಸರಾ ಮಹೋತ್ಸವ: ʼಪುತ್ತೂರು ದಸರಾʼಎಂಬ ಹೆಸರನ್ನು ತಂದವರು ಪ್ರೀತಂ ಪುತ್ತೂರಾಯರು – ಪಿ.ಜಿ.ಜಗನ್ನಿವಾಸ ರಾವ್

0

ಪುತ್ತೂರು: ಪುತ್ತೂರಿನಲ್ಲೂ ಒಂದು ದಸರಾ ಮಹೋತ್ಸವ ನಡೆಯಬೇಕೆಂದು ಪುತ್ತೂರಿನಲ್ಲಿ ʼಪುತ್ತೂರು ದಸರಾʼ ಎಂಬ ಹೆಸರನ್ನು ಮೊದಲು ತಂದವರು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಎಂದು ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಹೇಳಿದರು.
ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುತ್ತೂರು ದಸರಾ ಮಹೋತ್ಸವದಲ್ಲಿ ಮಾತನಾಡಿದರು. ಪ್ರೀತಂ ಪುತ್ತೂರಾಯ ಅವರು ಮೊದಲಿಂದಲೇ ಮೈಸೂರು, ಮಡಿಕೇರಿ, ಮಂಗಳೂರು ದಸರಾವನ್ನು ನೋಡಿ ಪುತ್ತೂರಿನಲ್ಲಿ ಯಾಕೆ ಮಾಡಬಾರದು ಎಂಬ ಚಿಂತನೆಯನ್ನು ಅವರು ಮಾಡಿಕೊಂಡಿದ್ದರು. ಹಾಗಾಗಿ ಪುತ್ತೂರಿಗೆ ಪುತ್ತೂರು ದಸರಾ ಎಂಬ ಹೆಸರನ್ನು ಮೊದಲು ತಂದು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಅಧ್ಯಕ್ಷತೆ ವಹಿಸಿದ್ದರು. ಪ್ರಾರ್ಥನೆ ಪ್ರಣಮ್ಯ ಪುತ್ತೂರಾಯ ಪ್ರಾರ್ಥಿಸಿದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯಕುಮಾರ್ ರೈ ಸ್ವಾಗತಿಸಿ, ವಿದ್ಯಾ ಜೆ ರಾವ್ ವಂದಿಸಿದರು. ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here