ಉಪ್ಪಿನಂಗಡಿ: ಶರದ್ ಕೊಠಾರಿ ಹಾಗೂ ರಾಮ ಕೊಠಾರಿ ಸಹೋದರರ ಸಹಿತ ಲಕ್ಷಾಂತರ ಹಿಂದೂಗಳ ಹೋರಾಟದ, ಪ್ರಾಣತ್ಯಾಗ ದ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ.
ರಾಮ ಜನ್ಮಭೂಮಿಗಾಗಿ ನಡೆದ ಹೋರಾಟದಲ್ಲಿ ಅಯೋಧ್ಯೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಹಿಂದೂಗಳ ಬಲಿದಾನದ ದಿವಸದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ವತಿಯಿಂದ ಮಂಗಳೂರು ಎ ಜೆ ಆಸ್ಪತ್ರೆ ಸಹಯೋಗದೊಂದಿಗೆ, ಉಪ್ಪಿನಂಗಡಿ ಗಾಣಿಗ ಸಮುದಾಯ ಭವನ ನಟ್ಟಿಬೈಲು ಇವರ ಸಹಕಾರದೊಂದಿಗೆ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಮ ಜನ್ಮ ಭೂಮಿ ಮರಳಿ ಹಿಂದೂಗಳಿಗೆ ಸಿಗಲು ನಡೆಸಿದ ಹೋರಾಟಗಳ, ಪ್ರಾಣ ತ್ಯಾಗದ ಇತಿಹಾಸವನ್ನು ಮುಂದಿನ ಪೀಳಿಗೆಗೂ ತಲುಪಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು..
ನಮ್ಮ ಜಿಲ್ಲೆಯಿಂದ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಹಲವರು ಪ್ರಾಣವನ್ನೂ ಲೆಕ್ಕಿಸದೆ ಕರಸೇವೆಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.. ಕೊಠಾರಿ ಸಹೋದರರು ರಾಮನಿಗಾಗಿ ಪ್ರಾಣ ತ್ಯಾಗ ಮಾಡಿದರೆ ಕಲ್ಲಡ್ಕ ಪ್ರಭಕರ ಭಟ್ ರವರು ತಮ್ಮ ಜೀವನವನ್ನೇ ರಾಮನಿಗಾಗಿ, ಹಿಂದೂ ಸಮಾಜಕ್ಕಾಗಿ ಮೀಸಲಿಟ್ಟವರು ಎಂದರು