ವಿವೇಕಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

0

“ಮಾನವ ಕಳ್ಳಸಾಗಣಿಕೆಯೆಂಬುದು ರಾಷ್ಟ್ರದ್ರೋಹಿ ಕೃತ್ಯ- ಡಾ.ದುರ್ಗಾರತ್ನಾ ಸಿ

ಪುತ್ತೂರು: ಮಾನವ ಕಳ್ಳ ಸಾಗಾಣಿಕೆ ಎಂಬುದು ಸಾಮಾಜಿಕ ಪಿಡುಗು. ಇಂತಹ ಕೃತ್ಯವನ್ನು ರಾಷ್ಟ್ರ ದ್ರೋಹಿಗಳು ಮಾಡುತ್ತಾರೆ. ಇಂತಹ ಕೃತ್ಯವನ್ನು ನಡೆಸುವಂತವರು ಪರರನ್ನು ಬಲಿಕೊಟ್ಟು ಬದುಕುವಂತಹ ದೃಶ್ಯಗಳನ್ನು ನಾವು ಸಮಾಜದಲ್ಲಿ ದಿನನಿತ್ಯ ಕಾಣುತ್ತೇವೆ ಎಂದು ವಿವೇಕಾನಂದ ಕಾಲೇಜಿನ ಯುವ ರೆಡ್ ಕ್ರಾಸ್ ನ ಅಧಿಕಾರಿ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನಾ ಸಿ.ಇವರು ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವರೆಡ್ ಕ್ರಾಸ್ ನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ” ಮಾನವ ಕಳ್ಳ ಸಾಗಾಣಿಕೆ ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ಇಂತಹ ಕೃತ್ಯಗಳು ನಡೆಯುತ್ತಿದೆ. ಇಂತಹ ಕೃತ್ಯಗಳಿಗೆ ಕೂಲಿ ಕೆಲಸದವರ ಮಕ್ಕಳನ್ನು ಮತ್ತು ಸಮಾಜದಲ್ಲಿ ಕೆಳವರ್ಗದಲ್ಲಿರುವಂತಹ ಕುಟುಂಬದ ಮಕ್ಕಳನ್ನು ಬಳಸುತ್ತಾರೆ. ಮುಖ್ಯವಾಗಿ ಪುಟ್ಟ ಮಕ್ಕಳನ್ನು, ಅಥವಾ ಹೆಣ್ಣು ಮಕ್ಕಳನ್ನು ಬಳಸುತ್ತಾರೆ. ಇದರ ಪರಿಣಾಮವಾಗಿ ಯಾವುದೋ ದೂರದ ಊರಿಗೆ ಮಕ್ಕಳನ್ನು, ಹೆಣ್ಣು ಮಕ್ಕಳನ್ನು ಸಾಗಿಸಿ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿ ಭಿಕ್ಷಾಟನೆ, ವೇಶ್ಯಾವಾಟಿಕೆ, ಜೀತದಾಳುಗಳಾಗಿ ಮತ್ತು ಅಂಗಾಂಗ ದಾನಕ್ಕಾಗಿ ಬಳಸುತ್ತಾರೆ. ಪುರುಷರನ್ನು ಕೂಡ ಜೀತದಾಳಾಗಿ ಬಳಸಿಕೊಳ್ಳುತ್ತಾರೆ, ಇಂತಹ ಅಪಾಯಗಳು ಎದುರಾಗುವ ಮೊದಲೇ ನಾವು ಎಚ್ಚರ ವಹಿಸಬೇಕು. ಅಪರಿಚಿತರನ್ನು ನಾವು ಯಾವತ್ತು ನಂಬಬಾರದು, ಮುಖ್ಯವಾಗಿ ಹೆಣ್ಣು ಮಕ್ಕಳು ಮೊಬೈಲ್ ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರನ್ನು ನಂಬಬಾರದು. ಸಾಮಾಜಿಕ ಜಾಲತಾಣಗಳನ್ನು ಬಳಸುವ ತುಂಬಾ ಎಚ್ಚರಿಕೆಯಿಂದ ಬಳಸಬೇಕು ಹಾಗೂ ಮೊಬೈಲನ್ನು ಸಕಾರಾತ್ಮಕ ವಿಷಯಗಳಿಗೆ ಮಾತ್ರ ಬಳಸಬೇಕು. ಇಂತಹ ಕೃತ್ಯಗಳಿಗೆ ಬಳಸಬಾರದು. ಇಂತಹ ಕೃತ್ಯಗಳಿಗೆ ಬಲಿಯಾದರೆ ಮಾನವನ ಭೌದ್ಧಿಕ ವಿಕಾಸಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಇವರು ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ನಡೆಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ವಿದ್ಯಾ ಕೆ ಏನ್, ರೆಡ್ ಕ್ರಾಸ್ ನ ಅಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷೆ ಮೇಘನಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕ ವರ್ಷಿತ್ ಮತ್ತು ಘಟಕ ನಾಯಕಿ ಮೈತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ವಿದ್ಯಾ ಕೆ ಎನ್. ವಂದಿಸಿ, ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಅಧಿಕಾರಿ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here