ಮೊಗಪ್ಪೆ ಕುರ್ಲಪ್ಪಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಅಶೋಕ್ ರೈರಿಂದ ಗುದ್ದಲಿಪೂಜೆ

0

ಕಾಮಗಾರಿ ಗುಣಮಟ್ಟವಿರಬೇಕು ಪರ್ಸಂಟೇಜ್ ಕೊಡ್ಲಿಕ್ಕೆ ಇಲ್ಲ: ಗುತ್ತಿಗೆದಾರಗೆ ಶಾಸಕರ ಸೂಚನೆ


ಪುತ್ತೂರು: ಮಾಡುವ ಕೆಲಸ ಚೆನ್ನಾಗಿರಬೇಕು, ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಪರಿಶೀಲನೆ ಮಾಡಬೇಕು, ಅರ್ದಂಬರ್ದ ಕಾಮಗಾರಿ ನಡೆಸಿ ಸ್ಥಳ ಖಾಲಿ ಮಾಡಬಾರದು, ಯಾರಿಗೂ ಪರ್ಸಂಟೇಜ್ ಕೊಡ್ಲಿಕ್ಕೆ ಇಲ್ಲ ಎಂದು ಶಾಸಕರಾದ ಅಶೋಕ್ ರೈಯವರು ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ.
ಅವರು ಕೊಳ್ತಿಗೆ ಗ್ರಾಮದ ಮೊಗಪ್ಪ ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಜನರ ದುಡ್ಡಿನ ಹಣದಿಂದಲೇ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಪರಿಜ್ಞಾನ ಗುತ್ತಿಗೆದಾರನಿಗೆ ಇರಬೇಕು, ಅವರಿಗೆ ಕೊಡ್ಲಿಕ್ಕೆ , ಇವರಿಗೆ ಕೊಡ್ಲಿಕ್ಕೆ ಉಂಟು ಎಂದು ಹೇಳಿ ರಸ್ತೆ ಕಾಮಗಾರಿ ವೇಳೆ ಅಳತೆಯಲ್ಲಿ ವ್ಯತ್ಯಾಸ ಬರಬಾರದು. ಬಿಡುಗಡೆಯಾದ ಅನುದಾನಕ್ಕೆ ಎಷ್ಟು ಉದ್ದದ ರಸ್ತೆಯಾಗುತ್ತದೋ ಅಷ್ಟೇ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಶಾಸಕರು ಹೇಳಿದರು.


ಗ್ರಾಮೀಣ ರಸ್ತೆಗಳು ಗುಣಮಟಟ್ಟದಿಂದ ಕೂಡಿರಬೇಕಾದರೆ ಗ್ರಾಮಸ್ಥರು ಕಾಮಗಾರಿಯನ್ನು ಪರಿಶೀಲಿಸಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮಕ್ಕ, ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮಲರಾಮಚಂದ್ರ, ಗ್ರಾಪಂ ಸದಸ್ಯ ಪವನ್ ದೊಡ್ಡಮನೆ, ಬಾಲಕೃಷ್ಣ ಕೆಮ್ಮಾರ, ಸುಂದರ ಮಣಿಕ್ಕರ, ಯಶೋಧ ಬಾಬುರಾಜೇಂದ್ರ, ವಸಂತಕುಮಾರ್ ರೈ ದುಗ್ಗಳ, ಶಿವರಾಂ ಪೂಜಾರಿ, ಮುರಳೀಧರ್ ಎಸ್ ಪಿ ಕೆಮ್ಮಾರ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here