ಪುತ್ತೂರಿನಲ್ಲಿ ಕುಂಟು ದಿ ಶಾಪ್ ವೆಡ್ಡಿಂಗ್ ಲಾಫ್ಟ್ ಶುಭಾರಂಭ

0

ನಂಬಿಕೆ ಮತ್ತು ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ-ಅಶೋಕ್ ರೈ

ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಕುಂಟು ದಿ ಶಾಪ್‌ನ ಸಹ ಸಂಸ್ಥೆ ವೆಡ್ಡಿಂಗ್ ಲಾಫ್ಟ್ ನ.6ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಮಳಿಗೆಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪುತ್ತೂರಿನಲ್ಲಿ ಉದ್ಯಮಗಳು ಹೆಚ್ಚುತ್ತಿದ್ದು ಇದು ಅಭಿವೃದ್ಧಿಯ ಸಂಕೇತವಾಗಿದೆ. ಪುತ್ತೂರಿನಿಂದ ಬೇರೆ ಕಡೆಗಳಿಗೆ ತೆರಳಿ ಜನರು ವಸ್ತ್ರಗಳನ್ನು ಖರೀದಿಸುವ ಬದಲು ಬೇರೆ ಊರಿನವರು ಪುತ್ತೂರಿಗೆ ಬಂದು ಡ್ರೆಸ್ ಖರೀದಿಸುವಂತಾಗಬೇಕು, ಆ ರೀತಿಯ ದರ, ಪ್ರಾಮಾಣಿಕ ವ್ಯವಹಾರ ಇಲ್ಲಿ ನಡೆಯಬೇಕು ಎಂದು ಅವರು ಹೇಳಿದರು. ನಂಬಿಕೆ ಮತ್ತು ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲವಾಗಿದ್ದು ಅಂತಹ ವಿಶ್ವಾಸವನ್ನು ಗಳಿಸುವ ಮೂಲಕ ಕುಂಟು ದ ಶಾಪ್ ಮಳಿಗೆ ಯಶಸ್ಸು ಸಾಧಿಸಲಿ ಎಂದು ಅವರು ಶುಭ ಹಾರೈಸಿದರು.

ಪ್ರಾಮಾಣಿಕ ವ್ಯವಹಾರದಿಂದ ಯಶಸ್ಸು-ಡಾ.ಉಮ್ಮರ್ ಬೀಜದಕಟ್ಟೆ
ಬೆಂಗಳೂರು ಫಾರ್ಮಾ ಲಿಮಿಟೆಡ್ ಇದರ ಸೀನಿಯರ್ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ.ಉಮ್ಮರ್ ಬೀಜದಕಟ್ಟೆ ಮಾತನಾಡಿ ಕುಂಟು ದಿ ಶಾಪ್ ಮಳಿಗೆ ಪರಿಶ್ರಮದ ಮೂಲಕ ಮತ್ತು ಗ್ರಾಹಕರ ವಿಶ್ವಾಸ ಗಳಿಸಿದ ಮೇಲೆ ಬಂದ ಸಂಸ್ಥೆಯಾಗಿದ್ದು ಇದು ಯಶಸ್ಸು ಸಾಧಿಸುವುದರಲ್ಲಿ ಸಂಶಯವಿಲ್ಲ. ಪ್ರಾಮಾಣಿಕತೆ ಮತ್ತು ಗುಣಮಟ್ಟದ ವ್ಯವಹಾರ ಮಾಡುವ ಯಾವುದೇ ಮಳಿಗೆ ಅಭಿವೃದ್ಧಿ ಕಾಣುತ್ತದೆ ಎಂದು ಅವರು ಹೇಳಿದರು.

ಇನ್ನಷ್ಟು ಮಳಿಗೆ ತೆರೆಯಲಿ-ವನಜಾ ಪ್ರಸಾದ್
ಕೆನರಾ ಬ್ಯಾಂಕ್‌ನ ಚೀಫ್ ಮೆನೇಜರ್ ವನಜಾ ಪ್ರಸಾದ್ ಎಚ್ ಮಾತನಾಡಿ ಕುಂಟು ದಿ ಶಾಪ್ ಮಳಿಗೆಯು ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಇದರ ಇನ್ನಷ್ಟು ಮಳಿಗೆಗಳು ಹೊರ ಜಿಲ್ಲೆಗಳಲ್ಲೂ ತೆರೆಯುವಂತಾಗಲಿ ಎಂದು ಹಾರೈಸಿದರು.

ಸನ್ಮಾನ:
ಮಳಿಗೆಯ ಇಂಟೀರಿಯರ್ ಡಿಸೈನ್ ಸೇರಿದಂತೆ ಎಲ್ಲ ಸೆಟ್ಟಿಂಗ್‌ಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಟ್ಟ ನೌಶಾದ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯರಾದ ಎಂ.ಎಸ್ ಮುಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಡಯಾ ಕೇರ್ ಸ್ಪೆಶಾಲಿಟಿ ಕ್ಲಿನಿಕ್‌ನ ವೈದ್ಯೆ ಡಾ.ಹಬೀನ, ಕೆನರಾ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಸೋಫಿ ಆರ್ ಕೃಷ್ಣ, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ, ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್ ಖಾಸಿಂ, ಇಸ್ಮಾಯಿಲ್ ಎಂ ಕೆನರಾ, ಪಿ.ವಿ ನಾರಾಯಣನ್, ಅಬ್ಬಾಸ್ ಉಚ್ಚಿಲ, ಸತ್ತಾರ್ ಬನ್ನೂರು,ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಅರಮನೆ ಗಾರ್ಮೆಂಟ್ಸ್‌ನ ಮಾಲಕ ಅಬ್ದುಲ್ ರಹಿಮಾನ್ ಹಾಜಿ, ಮಹಮ್ಮದ್ ಹುಸೇನ್, ಕುಂಟು ದಿ ಶಾಪ್‌ನ ಮಾಲಕ ಅಫ್ಝಲ್ ಅವರ ತಾಯಿ ಝೋಹರಾ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.ಕುಂಟು ದಿ ಶಾಪ್ ಮಳಿಗೆಯ ಮಾಲಕ ಅಫ್ಝಲ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕುಂಟು ದಿ ಶಾಪ್‌ನ ಇರ್ಷಾದ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

2000 ರೂ ಮೇಲ್ಪಟ್ಟ ಖರೀದಿಗೆ ಬಂಪರ್ ಬಹುಮಾನ:
ಶುಭಾರಂಭದ ಪ್ರಯುಕ್ತ ರೂ.2000 ಮೊತ್ತಕ್ಕಿಂತ ಹೆಚ್ಚಿನ ಡ್ರೆಸ್ ಖರೀದಿ ಮಾಡುವವರಿಗೆ ಮಳಿಗೆಯಲ್ಲಿ ಕೂಪನ್ ದೊರೆಯಲಿದ್ದು ಬಂಪರ್ ಬಹುಮಾನವಾಗಿ ರೆಫ್ರಿಜರೇಟರ್, ವಾಶಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್ ನೀಡಲಾಗುತ್ತದೆ. ಅಲ್ಲದೇ 25 ಇತರ ಬಹುಮಾನಗಳನ್ನು ಕೂಡಾ ನೀಡಲಾಗುತ್ತದೆ. 2024 ಎಪ್ರಿಲ್ 30ರಂದು ಇದರ ಡ್ರಾ ನಡೆಸಲಾಗುವುದು ಎಂದು ಕುಂಟು ದ ಶಾಪ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here