ಪುತ್ತೂರು: ಕಳೆದ 27 ವರ್ಷಗಳಿಂದ ಪುತ್ತೂರಿನಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ್‍ಸ್ 28ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ನ.13 ರಂದು ನವೀಕೃತ ಮಳಿಗೆಯ ಶುಭಾರಂಭ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ ನಡೆಯಲಿದೆ.
ವೈದಿಕ ವಿಶ್ವೇಶ್ವರ ಪುರೋಹಿತ್ ಬೆಳ್ಳಾರೆ ಹಾಗೂ ಹರಿಪ್ರಸಾದ್ ಭಟ್ ಕೆದಿಲ ಪೌರೋಹಿತ್ಯದಲ್ಲಿ ವಾಸ್ತು ಹೋಮ ಹಾಗೂ ಗಣಪತಿ ಹವನ ನಡೆದು, ಬಳಿಕ ಮಳಿಗೆ ನವೀಕರಣಗೊಂಡು ಬೆಳಿಗ್ಗೆ ಧನಲಕ್ಷ್ಮೀ ಪೂಜೆ ಹಾಗೂ ಗಣ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಮಳಿಗೆ ಶುಭಾರಂಭವು ನ.13ರಂದು ನಡೆಯಲಿದೆ. ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.
ಸಂಸ್ಥೆಯ ವೈಶಿಷ್ಟ್ಯತೆಗಳು :
ಸಂಸ್ಥೆಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದ್ದು ಗ್ರಾಹಕರಿಂದ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನವೀನ ಶೈಲಿಯ ಆಭರಣಗಳ ಸಂಗ್ರಹ, ಉತ್ಕೃಷ್ಟ ಶ್ರೇಣಿಯ ಕುಶಲ ಕರ್ಮಿಗಳಿಂದ ಆಭರಣ ತಯಾರಿ, ನಕ್ಷತ್ರ ಹಾಗೂ ರಾಶಿಫಲಗಳಿಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿಯಲ್ಲಿ ಆಭರಣ ತಯಾರಿ ಶಾಸ್ತ್ರೋಕ್ತವಾಗಿ ಹಿಂದೂ ಸಂಸ್ಕೃತಿಯಂತೆ ಮಕ್ಕಳಿಗೆ ಕಿವಿ, ಮೂಗು ಚುಚ್ಚುವ ಸೌಲಭ್ಯ ಹಾಗೂ ದೈವ ದೇವರುಗಳ ಬೆಳ್ಳಿ ಆಭರಣ ತಯಾರಿಕೆ ಮಾಡಲಾಗುವುದು.
ರಾಜ್ ಬೆನಿಫಿಟ್ಸ್ ಹೊಸ ಸ್ಕೀಂ ಪ್ರಾರಂಭ:
ತಿಂಗಳಿಗೆ 500/- ಹಾಗೂ 1000/- ಕಂತು ಅಥವಾ ಹೆಚ್ಚಿನ ಹಣ ಪಾವತಿಸಿದಿದ್ದಲ್ಲಿ ಅಂದಿನ ಧಾರಣೆಯಂತೆ ಚಿನ್ನ ಸಂಗ್ರಹಿಸುವ ಹೊಸ ಸ್ಕೀಂ ಪ್ರಾರಂಭವಾಗಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಮಾಲಕ ರಾಜ್’ಶೇಖರ್ ಆಚಾರ್ಯ ಎಸ್. ತಿಳಿಸಿದ್ದಾರೆ.
ಶುಭಾರಂಭದ ವಿಶೇಷ ಕೊಡುಗೆ :
ರಾಜ್ ಜ್ಯುವೆಲ್ಲರ್‍ಸ್ ನವೀಕೃತಗೊಂಡು ಶುಭಾರಂಭಗೊಳ್ಳಲಿರುವ ಸಂದರ್ಭದಲ್ಲಿ ವಿಶೇಷ ಕೊಡುಗೆ ಆಯೋಜಿಸಲಾಗಿದೆ. ನ.13ರಿಂದ 2024ರ ಜ.5ರವರೆಗೆ ರೂ.10,000 ಮೊತ್ತದ ಚಿನ್ನಾಭರಣ ಖರೀದಿಯ ಮೇಲೆ ಕೂಪನ್ ಪಡೆದು ವಿಶೇಷ 2 ಚಿನ್ನದ ಉಂಗುರ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.