ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಳ್ಳಿ ಸೊಗಡಿನ ಶುಚಿ-ರುಚಿಯಾದ ಖಾದ್ಯಗಳ, ಆರೋಗ್ಯದಾಯಕ ಪಾನೀಯಗಳ ತಾಜಾ ಸಸ್ಯಾಹಾರಿ ಹೊಟೇಲ್ ಸೆಲ್ಫ್ ಸರ್ವಿಸ್ ಒಳಗೊಂಡ ‘ಫ್ಯೂರ್ ವೆಜ್ ಹೆರಿಟೇಜ್’ ಪ್ರಶಾಂತ್ ಮಹಲ್ ನಲ್ಲಿ ನ.16 ರಂದು ಶುಭಾರಂಭಗೊಳ್ಳಲಿದೆ.
ನೂತನ ಹೊಟೇಲ್ ನ ಮಾರ್ಗದರ್ಶಕರೂ, ಪ್ರಶಾಂತ್ ಮಹಲ್ ಮಾಲಕರೂ ಆಗಿರುವ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈಯವರು ನೂತನ ವೆಜ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ನಿರ್ದೇಶಕ ಅಶ್ವಿನ್ ಕುಮಾರ್ ಶೆಟ್ಟಿ ಸಹಿತ ಹಲವರು ಭಾಗವಹಿಸಲಿದ್ದಾರೆ.
ಖಾದ್ಯಗಳು:
ಡೋಕ್ಲ, ದಾಬೇಲಿ, ಮಿಸಲ್ ಪಾವ್, ಉಸಲ್ ಪಾವ್, ತಟ್ಟೆ ಇಡ್ಲಿ, ಹುರುಳಿ ಇಡ್ಲಿ, ಚಟ್ನಿಪುಡಿ ಇಡ್ಲಿ, ಬೆಳಿಗ್ಗೆಯಿಂದ ಗಂಜಿ ಊಟ, ಮಧ್ಯಾಹ್ನದ ಊಟದ ಜೊತೆಗೆ ವಿವಿಧ ತಿಂಡಿ ತಿನಿಸುಗಳು ಹಾಗೆಯೇ ಲಿಂಬೆ ಶುಂಠಿ ಶರಬತ್ತು, ನನ್ನಾರಿ ಶರಬತ್ತು, ಬಂದೆಲಗ ಜ್ಯೂಸ್, ನೆಲ್ಲಿಕಾಯಿ ಜ್ಯೂಸ್, ಸೋರೆಕಾಯಿ ರಸಾಯನ, ಬಾಳೆಹಣ್ಣು ರಸಾಯನ ಹಾಗೂ ವಿವಿಧ ಬಗೆಯ ತರಕಾರಿಗಳ ಮತ್ತು ಧಾನ್ಯಗಳ ಜ್ಯೂಸ್ ಲಭ್ಯವಿದೆ ಎಂದು ನೂತನ ವೆಜ್ ರೆಸ್ಟೋರೆಂಟ್ ನ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಶಿಷ್ಟ್ಯತೆಗಳು…
-ಪ್ರತ್ಯೇಕ ಕಿಚನ್ ವ್ಯವಸ್ಥೆ ಹಾಗೂ ಸೆಲ್ಫ್ ಸರ್ವೀಸ್
-ವಿವಿಧ ರಾಜ್ಯಗಳ ಪ್ರಸಿದ್ಧ ತಿಂಡಿ-ತಿನಸುಗಳು(ಆಯಾ ದಿನಕ್ಕೆ)
-ಬೆಳಿಗ್ಗೆ 6 ಗಂಟೆಗೆ ಗಂಜಿ ಊಟ
-ಆರೋಗ್ಯದಾಯಕ ಪಾನೀಯಗಳು
-ಬೆಳಿಗ್ಗೆಯಿಂದ ರಾತ್ರಿವರೆಗೆ ಕೌಂಟರ್ ತೆರೆದಿರುತ್ತದೆ
-ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ