ಪುತ್ತೂರಿನಲ್ಲಿ ಅಪರಾಧಿಯಲ್ಲದವರಿಗೂ ಗಡಿಪಾರು ಆದೇಶ – ಸರಕಾರದ ವಿರುದ್ಧ ಸಂಸದ ನಳಿನ್ ಆಕ್ರೋಶ

0

ಪುತ್ತೂರು: ಯಾವುದೇ ಅಪರಾಧದಲ್ಲಿ ಭಾಗವಹಿಸದಿದ್ದರು ಪುತ್ತೂರಿನ ನಾಲ್ವರಿಗೆ ಗಡಿಪಾರು ಮಾಡಿರುವ ಆದೇಶದ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದರು ಕಾಂಗ್ರೆಸ್ ಸರಕಾರ ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡಿಪಾರು ಮಾಡುವ ಕೆಲಸ ಮಾಡುತ್ತಿದೆ.ವಿಶೇಷವಾಗಿ ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಿ ಗಡಿಪಾರು ಮಾಡುವ ಆದೇಶ ಮಾಡಿದ್ದಾರೆ. ಈ ರೀತಿಯ ದ್ವೇಷದ ರಾಜಕಾರಣ ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ಒಂದೇ ಒಂದು ಕೇಸ್ ಇಲ್ಲ. ಆದರೂ ಗಡಿಪಾರು ಆದೇಶ ಮಾಡಿದ್ದಾರೆ ಇದನ್ನು ನಾವು ಕಾರ್ಯರೂಪಕ್ಕೆ ತರಲು ಬಿಡುವುದಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಗೋ ಹತ್ಯೆ, ರೈತರ ಆತ್ಮಹತ್ಯೆಗಳು, ಕಾರ್ಯಕರ್ತರ ಹತ್ಯೆಗಳು ಜಾಸ್ತಿಯಾಗಿದೆ. ಪುತ್ತೂರಿನಲ್ಲಿ ಎರಡು ಹತ್ಯೆಗಳು 6 ತಿಂಗಳ ಒಳಗೆ ನಡೆದಿದೆ. ಉಡುಪಿಯಲ್ಲಿ ನಾಲ್ಕು ಹತ್ಯೆಗಳು ಒಂದೇ ಮನೆಯಲ್ಲಿ ನಡೆದಿದೆ. ಗುಪ್ತಚರ ಇಲಾಖೆ ಎನು ಮಾಡುತ್ತಿದೆ. ಸರಕಾರ ಇವತ್ತು ಕಣ್ಣು ಮುಚ್ಚಿ ಕೂತಿದೆ. ಅಭಿವೃದ್ದಿ ಕಾರ್ಯದಲ್ಲಿ ಕುಂಠಿತ ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯಣ್ಣ ಯಾವಾಗ ಯಾವಾಗ ಮುಖ್ಯಮಂತ್ರಿಯಾಗುತ್ತಾರೋ ಆವಾಗ ಗೂಂಡಾಗಳಿಗೆ ಲಾಭವಾಗುತ್ತದೆ ಎಂದರು.


ಮಂಗಳೂರು ಗೋವಾ ವಂದೇ ಭಾರತ್ ರೈಲು
ವಂದೇ ಭಾರತ್ ಮಂಗಳೂರಿನಿಂದ ಗೋವಾದ ತನಕ ಸ್ಯಾಂಕ್ಷನ್‌ ಆಗಿದೆ. ಅದಕ್ಕೆ ವೇಳಾಪಟ್ಟಿಯೂ ನಿಗದಿಯಾದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜಿಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here