ಪುತ್ತೂರು: ಶಾಂತಿಮೊಗರು ಮಾರ್ಗವಾಗಿ ಪುತ್ತೂರು, ಕಡಬ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಶಾಸಕರ ಕೋರಿಕೆಯ ಮೇರೆಗೆ ಕೆಎಸ್ಆರ್ಟಿಸಿ ಬಸ್ಸುಗಳ ಓಡಾಟ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕೆಲವೊಂದು ಹೊಸ ರೂಟ್ಗಳಲ್ಲಿಯೂ ಬಸ್ಸು ಓಡಾಟ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕೆಎಸ್ಆರ್ಟಿಸಿ ಬಸ್ಸುಗಳ ಓಡಾಟ ಕುರಿತು ಬಹುಸಮಯದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಂತಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸೌಲಭ್ಯವಿಲ್ಲದೆ, ಕೆಲವೆಡೆ ಹೆಚ್ಚುವರಿ ಬಸ್ಸುಗಳ ಓಡಾಟದ ಕೊರತೆಯಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಹಲವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ದೂರು ನೀಡಿ, ಬಸ್ಸುಗಳ ಓಡಾಟಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 19 ರೂಟ್ಗಳಲ್ಲಿ ಬಸ್ಸುಗಳ ಓಡಾಟಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥೆ ಮಾಡಿದೆ.
ಬಸ್ಸುಗಳ ಓಡಾಟದ ರೂಟ್ಗಳು ಮತ್ತು ಸಮಯದ ವಿವರ. ಬಸ್ಸಿನ ನಿರ್ಗಮನ ಮತ್ತು ಆಗಮನ ಸಮಯವನ್ನು ಅನುಕ್ರಮವಾಗಿ ಆವರಣದಲ್ಲಿ ನೀಡಲಾಗಿದೆ. ಪುತ್ತೂರು-ಶಾಂತಿಮೊಗರು-ಕಡಬ(18.00, 19.00), ಕಡಬ-ಶಾಂತಿಮೊಗರು-ಪುತ್ತೂರು(6.45, 7.45), ಪುತ್ತೂರು-ಮುಡ್ಪಿನಡ್ಕ ವಯಾ ಬಡಗನ್ನೂರು(07.30, 08.05), ಮುಡ್ಪಿನಡ್ಕ-ಪುತ್ತೂರು ವಯಾ ಬಡಗನ್ನೂರು(08.10, 08.45), ಪುತ್ತೂರು-ಮುಡ್ಪಿನಡ್ಕ ವಯಾ ಬಡಗನ್ನೂರು(16.30, 17.05), ಮುಡ್ಪಿನಡ್ಕ-ಪುತ್ತೂರು ವಯಾ ಬಡಗನ್ನೂರು(17.35, 18.10), ಪುತ್ತೂರು-ವಿಟ್ಲ ವಯಾ ಬುಳೇರಿಕಟ್ಟೆ, ಪುಣಚ(07.15, 08.00), ವಿಟ್ಲ-ಪುತ್ತೂರು ವಯಾ ಪುಣಚ, ಬುಳೇರಿಕಟ್ಟೆ(08.10, 08.55), ಪುತ್ತೂರು-ವಿಟ್ಲ ವಯಾ ಬುಳೇರಿಕಟ್ಟೆ, ಪುಣಚ(17.15, 18.00), ವಿಟ್ಲ-ಪುತ್ತೂರು ವಯಾ ಪುಣಚ ಬುಳೇರಿಕಟ್ಟೆ(18.15, 19.00), ಪುತ್ತೂರು-ಸುಳ್ಯಪದವು ವಯಾ ರೆಂಜ ಮುಡ್ಪಿನಡ್ಕ(16.30, 17.30), ಸುಳ್ಯಪದವು-ಪುತ್ತೂರು ವಯಾ ಮುಡ್ಪಿನಡ್ಕ, ರೆಂಜ( 17.30, 18.35), ಸುಳ್ಯಪದವು-ಪುತ್ತೂರು ವಯಾ ಮುಡ್ಪಿನಡ್ಕ, ರೆಂಜ(08.20, 09.20), ಪುತ್ತೂರು-ನುಳಿಯಾಲು ವಯಾ ರೆಂಜ ಬೆಟ್ಟಂಪಾಡಿ, ಕೊರಿಂಗಿಲ, ಕಕ್ಕೂರು(07.25, 08.05),ನುಳಿಯಾಲು-ಪುತ್ತೂರು ವಯಾ ತಂಬುತ್ತಡ್ಕ, ರೆಂಜ(08.10, 08.50), ಪುತ್ತೂರು ನುಳಿಯಾಲು ವಯಾ ರೆಂಜ, ತಂಬುತ್ತಡ್ಕ(16.45, 17.25), ನುಳಿಯಾಲು-ಪುತ್ತೂರು ವಯಾ ಕಕ್ಕೂರು,ಕೊರಿಂಗಿಲ, ಬೆಟ್ಟಂಪಾಡಿ,ರೆಂಜ(17.30, 18.10), ಪುತ್ತೂರು-ನುಳಿಯಾಲು ವಯಾ ರೆಂಜ, ತಂಬುತ್ತಡ್ಕ(13.00, 13.40)ಮತ್ತು ನುಳಿಯಾಲು-ಪುತ್ತೂರು ವಯಾ ಕಕ್ಕೂರು, ಕೊರಿಂಗಿಲ, ಬೆಟ್ಟಂಪಾಡಿ, ರೆಂಜ(13.45, 14.25)
ವಿದ್ಯಾರ್ಥಿಗಳ, ಸಾರ್ವಜನಿಕರ ಬೇಡಿಕೆಯಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 19 ಹೊಸ ರೂಟ್ಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ಪ್ರಾರಂಭದಲ್ಲಿ ಎಂಟು ಬಸ್ಸುಗಳು ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೆ ಇನ್ನೂ ಹೆಚ್ಚಿನ ಬಸ್ಗಳು ಬರಲಿವೆ. ಬಸ್ ಸಂಚಾರ ಇಲ್ಲದೆ ಹಲವು ವರ್ಷಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರು ತೊಂದರೆಯಲ್ಲಿದ್ದರು. ಮೊದಲ ಹಂತದಲ್ಲಿ ಬಹುತೇಕ ಎಲ್ಲಾ ಭಾಗಗಳಿಗೂ ಬಸ್ ವ್ಯವಸ್ಥೆಯನ್ನು ಸಮಾನ ರೀತಿಯಲ್ಲಿ ಸಂಚಾರಕ್ಕೆ ಕ್ರಮಕೈಗೊಳ್ಳಲು ಸೂಚನೆಯನ್ನು ನೀಡಿದ್ದೇನೆ. ಮುಂದೆ ಇನ್ನೂ ಬಸ್ಸುಗಳು ಬರಲಿವೆ. ಗ್ರಾಮೀಣ ಭಾಗದ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು