ದ. 20-26: ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ 32 ನೇ ವಾರ್ಷಿಕ ಪ್ರತಿಷ್ಠಾ ಉತ್ಸವ

0

ಪುತ್ತೂರು: ಶ್ರೀರಾಮ ಮಂದಿರ (ರಿ.) ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ 32 ನೇ ವಾರ್ಷಿಕ ಪ್ರತಿಷ್ಠಾ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ದ. 20 ರಿಂದ 26 ರವರೆಗೆ ನಡೆಯಲಿದೆ.


ದ. 20 ರಂದು ಸಂಜೆ ಉದ್ಘಾಟನೆ ನಡೆಯಲಿದೆ. ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ ಮದ್ಲ ಉದ್ಘಾಟಿಸಲಿದ್ದಾರೆ‌. ಶ್ರೀರಾಮ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಜೈ ಶಂಕರ ರೈ ಬೆದ್ರುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೆದಂಬಾಡಿ ಗ್ರಾ.ಪಂ.‌ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಕಲಾಪೋಷಕ ಭುಜಬಲಿ ಧರ್ಮಸ್ಥಳ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಹಾಗೂ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂತ ಫಿಲೋಮಿನಾ ಕಾಲೇಜು ಯಕ್ಷ ಕಲಾ‌ಕೇಂದ್ರದ ವಿದ್ಯಾರ್ಥಿಗಳಿಂದ ‘ಭರತ ವೈಭವ’ ನಡೆಯಲಿದೆ.


ದ. 21 ರಂದು ಸೂರ್ಯೋದಯದಿಂದ ವಿವಿಧ ಭಜನಾ ಮಂಡಳಿಗಳಿಂದ ‘ಅರ್ಧ ಏಕಾಹ ಭಜನೆ’ ನಡೆಯಲಿದೆ. ದ. 22 ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆಯಲಿದೆ. ರಾತ್ರಿ ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಕೆದಂಬಾಡಿ ಇವರ 27 ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ಮೇಳದಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.


ದ. 23 ರಂದು ಸಂಜೆ ‘ಶ್ರೀರಾಮ ಕಲ್ಪೋಕ್ತ ಪೂಜೆ’ ಜರಗಲಿದೆ. ದ. 24 ರಂದು ಭಜನೆ, ದ. 26 ರಂದು ಸ್ಥಳ ಸಾನಿಧ್ಯ ದೈವಗಳಾದ ಶ್ರೀ ಗುಳಿಗ ಮತ್ತು ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಕಾರ್ಯಕ್ರಮಗಳ ದಿನ ಭಜನೆ ಸೇವೆ, ಅನ್ನಸಂತರ್ಪಣೆ ಸೇವೆಗಳು ನಡೆದುಬರಲಿವೆ ಎಂದು ಶ್ರೀರಾಮ ಮಂದಿರದ ಆಡಳಿತ ಸಮಿತಿ ಹಾಗೂ ಶ್ರೀರಾಮ ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ದ. 20: ಆಮಂತ್ರಣ ಪರಿವಾರ’ ದಿಂದ ಸಾಂಸ್ಕೃತಿಕ ‌ಕಾರ್ಯಕ್ರಮ
ಪ್ರತಿಷ್ಠಾ ಉತ್ಸವದ ಅಂಗವಾಗಿ ನಡೆಯಲಿರುವ ದ. 20 ರಂದು ರಾತ್ರಿ ಆಮಂತ್ರಣ ಪರಿವಾರ ಅಳದಂಗಡಿ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದ. 22 ರಂದು ಶ್ರೀ ಕಟೀಲು ಮೇಳದಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ
ಕೆದಂಬಾಡಿ ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಇವರ 27 ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here