ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ವಿಶ್ವಶಾಂತಿಯ ಮೂರ್ತ ಸ್ವರೂಪ. ಕ್ಷಮೆಯ ಸಾಕಾರ ಮೂರ್ತಿಯಾಗಿರುವ ಏಸುಕ್ರಿಸ್ತರ ಹುಟ್ಟುಹಬ್ಬದ ಸಂಭ್ರಮ “ಕ್ರಿಸ್ ಮಸ್ ಹಬ್ಬದ ಆಚರಣೆ “ಯನ್ನು ಶಾಲಾ ಸಂಚಾಲಕರಾದ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ದಾನಿಗಳು, ಉದ್ಯಮಿಗಳಾಗಿರುವ ರೋಡ್ರಿಗಸ್ ಚಿಕನ್ ಸೆಂಟರ್ ಮಾಲಕ ಲ್ಯಾನ್ಸಿ ರೋಡ್ರಿಗಸ್, ಅವರ ಪತ್ನಿ ಗ್ಲಾಡಿಯಸ್ ರೋಡ್ರಿಗಸ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಸದಸ್ಯೆ ಮಮತಾ ಶ್ರೀವಾತ್ಸವ್, ಬ್ಯಾಂಕ್ ಆಫ್ ಬರೋಡದ ಪ್ರಬಂಧಕಿ ಸುಗಣಾವತಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 6ನೇ ತರಗತಿ ಮಕ್ಕಳಿಂದ ಯೇಸು ಕ್ರಿಸ್ತರ ಜನನದ ಕುರಿತಾದ ನೃತ್ಯ ರೂಪಕ, ಹಾಡು ಮತ್ತು ನೃತ್ಯ ಪ್ರಸ್ತುತಗೊಂಡಿತು. ಶಾಲೆಗೆ ಹಲವು ರೂಪದ ಸಹಕಾರ ನೀಡಿರುವ ದಾನಿಗಳು, ಉದ್ಯಮಿಗಳಾದ ರೋಡ್ರಿಗಸ್ ಚಿಕನ್ ಸೆಂಟರ್ ಮಾಲಕರಾಗಿರುವ ಲ್ಯಾನ್ಸಿ ರೋಡ್ರಿಗಸ್ ದಂಪತಿಗಳನ್ನು ಸನ್ಮಾನಿಸಲಾಯಿತು. ಆರಾಧನಾ ಸ್ವಾಗತಿಸಿ, ಲಿಖಿತ್ ಎಸ್. ಗೌಡ ವಂದಿಸಿದರು. ಜುವೆನ್ನಾ ಕುಟಿನ್ಹಾ, ಆಯಿಷತ್ ತೌಫೀರ ಕಾರ್ಯಕ್ರಮ ನಿರೂಪಿಸಿದರು.