ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನಕ್ಕೆ ಪುತ್ತಿಗೆ ಶ್ರೀಗಳ ಭೇಟಿ-ಶ್ರೀಗಳಿಂದ ನೇಮೋತ್ಸವದ ಕಾರ್ಯಾಲಯ ಉದ್ಘಾಟನೆ

0

ಪುತ್ತೂರು:ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜ.7ರಂದು ನಡೆಯಲಿರುವ ಕಾರ್ಯಲಯವನ್ನು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರರು ಜ.5ರಂದು ದೀಪ ಬೆಳಗಿಸಿ ಉದ್ಘಾಟಿಸಿದರು.


ಕಾರ್ಯಾಲಯ ಉದ್ಘಾಟಿಸಿದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರರು ಮಾತನಾಡಿ, ದೇವಸ್ಥಾನ ಮತ್ತು ದೈವಸ್ಥಾನಗಳು ಊರಿನ ಹೃದಯಗಳಿದ್ದಂತೆ. ಹೃದಯ ಉತ್ತಮವಾಗಿದ್ದರೆ ಆರೋಗ್ಯವು ಉತ್ತಮವಾಗಿರುತ್ತದೆ. ಅನಾರೋಗ್ಯ ಉಂಟಾದಾಗ ವೈದ್ಯರು ಮೊದಲು ಹೃದಯವನ್ನು ಪರೀಕ್ಷಿಸುವುದು. ಹೃದಯ ಸರಿಯಾಗಿದ್ದರೆ ಉಳಿದ ಭಾಗಗಳು ಸರಿಯಾಗಿರುತ್ತದೆ. ಅದೇ ರೀತಿ ದೇವಸ್ಥಾನ, ದೈವಸ್ಥಾನಗಳು ಊರಿನ ಹೃದಯಗಳಿದ್ದಂತೆ. ಅಲ್ಲಿನ ನಾಡಿ ಮಿಡಿತ ಸರಿಯಾಗಿದ್ದರೆ ಉಳಿದೆಲ್ಲವೂ ಸರಿಯಾಗಿರುತ್ತದೆ. ಅದು ಬಡವಾಗಬಾರದು. ಈ ದೃಷ್ಠಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ, ಪಾಂಗಳಾಯ ದೈವಸ್ಥಾನ ಪುತ್ತೂರಿನ ಅಭಿವೃದ್ಧಿಗೆ ಮೂಲಕಾರಣ. ಇದು ತುಂಬಾ ಅಭಿವೃದಿ ಹೊಂದುತ್ತಿರುವುದು ಸಂತಷ ತಂದಿದೆ. ಎರಡೂ ಸನ್ನಿದಾನಗಳ ಮೂಲಕದ ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಶ್ರೀಗಳಿಂದ ಕೋಟಿ ಗೀತಾ ಯಜ್ಞದ ಮಹತ್ಕಾರ್ಯ ನಡೆಯುತ್ತಿದೆ. ದಿನಕ್ಕೆ ಎರಡು ಶ್ಲೋಕ ಬರೆದಾಗ ಇಡೀ ಶ್ಲೋಕ ಬರೆದಂತಾಗುತ್ತದೆ. ಇದರ ದೈವಸ್ಥಾನದ ಧಾರ್ಮಿಕ ಶಿಕ್ಷಣ ತರಬೇತಿ ಕೇಂದ್ರದ ಮೂಲಕ ಪ್ರಾಂಭವಾಗುತ್ತದೆ. ಗೀತೆಯ ಪುಸ್ತಕ ಲಭ್ಯವಿದೆ. ಧಾರ್ಮಿಕ ಶಿಕ್ಷಣ ತರಬೇತಿ ಮೂಲಕ ಬರೆಯಲು ಆಸಕ್ತಿಯುಲ್ಲವರು ಪಡೆದುಕೊಂಡು ಬರೆಯುವ ಮೂಲಕ ಗೀತಾ ಯಜ್ಞದಲ್ಲಿ ಪಾಲ್ಗೊಳ್ಳಬಹುದು ಎಂದರು.


ದೈವಸ್ಥಾನದ ಮಾಜಿ ಅಧ್ಯಕ್ಷ ಪಿ.ಎಸ್. ರಾಜಗೋಪಾಲ ಶಗ್ರಿತ್ತಾಯ, ಮಹಾದೇವ ಶಾಸ್ತ್ರಿ ಮಣಿಲ ಸ್ವಾಮಿಜಿಯವರನ್ನು ಫಲ, ಪುಷ್ಪ ನೀಡಿ ಗೌರವಿಸಿದರು. ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಧಾರ್ಮಿಕ ಶಿಕ್ಷಣ ತರಬೇತಿ ಕೇಂದ್ರದ ಕೃಷ್ಣವೇಣಿ ಮುಳಿಯ, ದೈವಸ್ಥಾನದ ಅಧ್ಯಕ್ಷ ತಾರಾನಾಥ ರೈ ಬಿ. ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ, ಉಪಾಧ್ಯಕ್ಷ ಪ್ರಶಾಂತ್ ಪಾಂಗಳಾಯಿ, ಜತೆ ಕಾರ್ಯದರ್ಶಿ ಸುಪ್ರಿತಾ ಸುನಿಲ್, ಕೋಶಾಧಿಕಾರಿ ಜಯಶಂಕರ ರೈ, ಸದಸ್ಯರಾದ ವಿನಯ ಭಂಡಾರಿ ಪಾಂಗಳಾಯಿ, ಸುರೇಶ್ ನಾೖಕ್‌ , ಕರುಣಾಕರ ಆಲೆಟ್ಟಿ, ಗಂಗಾಧರ ನಾೖಕ್‌ , ಪರಮೇಶ್ವರ ನಾಯ್ಕ, ಗೋಪಾಲ ನಾೖಕ್‌ , ತಾರಾನಾಥ ಆಚಾರ್ಯ, ಭಾಸ್ಕರ ಆಚಾರ್ಯ ಸೇರಿದಂತೆ ಹಲವು ಮಂದಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಸಂಪತ್ ಕುಮರ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here