ಪುತ್ತೂರು: ಸರಿಸುಮಾರು 382 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಶ್ರೀ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.25 ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಜ.15 ರಂದು ಶ್ರೀ ಕ್ಷೇತ್ರ ಮಣ್ಣಾಪುವಿನ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅಧ್ಯಕ್ಷತೆಯಲ್ಲಿ ಜರಗಿತು.
ಜ.25 ರಂದು ನೇಮೋತ್ಸವ:
ಕಳೆದ ಮೂರು ವರ್ಷಗಳಲ್ಲಿ ಶ್ರೀ ಕ್ಷೇತ್ರದ ನೇಮೋತ್ಸವವು ಅಪಾರ ಭಕ್ತರ ಆಗಮಿಸುವಿಕೆಯಿಂದ ಎಲ್ಲವೂ ಯಶಸ್ವಿಯಾಗಿ ಕಂಡಿತ್ತು. ಈ ಬಾರಿಯೂ ಶ್ರೀ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ನೇಮೋತ್ಸವದ ಯಶಸ್ವಿಗೆ ಎಲ್ಲರೂ ಪಾಲುದಾರರಾಗಬೇಕು. ಇಲ್ಲಿನ ಕೊರಗಜ್ಜ ದೈವಕ್ಕೆ ಶಕ್ತಿಯಿದೆ, ಹೆಸರಿದೆ ಎಂಬುದಕ್ಕೆ ಶ್ರೀ ಕ್ಷೇತ್ರದಲ್ಲಿ ಸೇರುವ ಭಕ್ತರ ಗಡಣವೇ ಸಾಕ್ಷಿಯಾಗಿದೆ. ನೇಮೋತ್ಸವವು ಬಹಳ ಶಿಸ್ತುಬದ್ಧವಾಗಿ ನಡೆಯಲಿ ಎಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಹೇಳಿದರು.
ಈ ಸಂದರ್ಭದಲ್ಲಿ ನೇಮೋತ್ಸವವು ಯಶಸ್ವಿಯಾಗುವ ನಿಟ್ಟಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು. ಶ್ರೀ ಕ್ಷೇತ್ರದ ಅರ್ಚಕ ಕುಂಡ ಮೊಗೇರ, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ವಿಶ್ವನಾಥ ನಾಯ್ಕ ಅಮ್ಮುಂಜ, ಪಂಚಮಿ ಶಾಮಿಯಾನದ ವಿಶ್ವನಾಥ್ ನಾಯ್ಕ್ ನೈತಾಡಿ, ಸುಧೀರ್ ಅತ್ತಾಳ, ಯಶವಂತ ಪೆರಾಜೆ, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಉಮೇಶ್ ಮಣ್ಣಾಪು, ಪಂಜಳ ಶ್ರೀರಾಂ ಗೆಳೆಯರ ಬಳಗದ ಚೆನ್ನಪ್ಪ ಗೌಡ ಹಾಗೂ ಸದಸ್ಯರು, ದಿನೇಶ್ ಮಣ್ಣಾಪು, ಗಂಗಾಧರ ಮಣ್ಣಾಪು, ಉಮೇಶ್ ಮಣ್ಣಾಪು, ಬಾಬು ಮಣ್ಣಾಪು, ಸತೀಶ್ ಮಣ್ಣಾಪು, ನಾಗೇಶ್ ಮಣ್ಣಾಪು, ಲೋಕೇಶ್ ಮಣ್ಣಾಪು ಸಹಿತ ಹಲವರು ಉಪಸ್ಥಿತರಿದ್ದರು.