ಕೊಂಬಾರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ ಸನ್ಮಾನ

0

ನಾಟಕ ಕಲಾವಿದರಿಗೆ “ತುಳುನಾಡ್ದ ತೆಲಿಕೆದ ತ್ರಿಮೂರ್ತಿಳು” ಬಿರುದು ಪ್ರಧಾನ

ಕಡಬ: ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಬಾರು ಗ್ರಾಮ ಮತ್ತು ಸಿರಿಬಾಗಿಲು ಗ್ರಾಮದ ಶಿಕ್ಷಣ, ಕ್ರೀಡೆ ಹಾಗೂ ವಿಶೇಷವಾಗಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜ.12ರಂದು ಸಮ್ಮಿತ್ರ ಗೆಳೆಯರ ಬಳಗ ಕೆಂಜಲ ಇದರ ವತಿಯಿಂದ ಕೆಂಜಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಇದರ ವಠಾರದಲ್ಲಿ ನಡೆಯಿತು.


ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಾ. ಶಿವ ಸುಬ್ರಹ್ಮಣ್ಯ ಕೆ.ಸಿ. ಕೂತೂರು, ಕು. ಯಕ್ಷ ಪಿ.ಎಸ್. ಪೆರುಂದೋಡಿ ಮನೆ, ಕು.ಶರಣ್ಯ ವಿ.ಆರ್. ಎಣಿಕ್ಕಳ ಮನೆ, ಕು.ಸಿಂಧೂರ ವಿ.ಎಸ್. ಎಣಿಕ್ಕಲ ಮನೆ, ಕು.ಸುಜ್ಞ ಎಂ.ಆರ್. ಮುಗೇರು ಮನೆ, ಮಾ.ಬ್ರಿಜೇಶ್ ಕುಂಡಕೋರಿ ಮನೆ, ಮಾ.ಅಕ್ಷಯ್ ಡಿ.ಸಿ ಕುಂಡಕೋರಿ ಮನೆ, ಕು.ಸೇವಿಕ ಡಿ ಕೆ. ಕೊಲ್ಕಜೆ ಮನೆ, ಕು.ಮೋಕ್ಷ ಡಿ ಡಮ್ಮಡ್ಕ ಮನೆ, ಮಾ.ಪುನೀತ್ ಎಸ್.ಬಿ. ಬೀಡು ಮನೆ, ಮಾ.ನಿಕೀಲ್ ಗುಂಡ್ಯ ಮನೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕು.ನಮೃತ ಬೀಡು ಕುಂಡಕೋರಿ ಮನೆ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕ ವಿದ್ಯಾರ್ಥಿಗಳಾದ ಕರ್ನಾಟಕ ರಾಜ್ಯ ಕಬಡ್ಡಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದ ತಂಡದ ನಾಯಕಿ ಕು.ಲಿಖಿತ ಅಗರಿ ಮನೆ, ರಾಷ್ಟ್ರಮಟ್ಟದ ಸಾಫ್ಟ್ ಬಾಲ್ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಕು.ವಿಜಯಶ್ರೀ, ವಿನಯಶ್ರೀ ಬೊಟ್ಟಡ್ಕ ಮನೆ, ಹಾಗೂ ಕು.ಚೈತನ್ಯ ಡಿ.ಎಂ. ಡಮ್ಮಡ್ಕ ಮನೆ, ಕು.ಮೋಕ್ಷ ಕೆ.ಜಿ ಕೈಂತಿಲ ಮನೆ, ಕು. ಹರಿಣಿ ಕೋಲ್ಪೆ ನಡುಬೈಲು ಮನೆ, ಕು.ಲಿಖಿತ ಕೋಲ್ಪೆ ಮನೆ ಇವರನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಕಾರ‍್ಯಕ್ರಮದಲ್ಲಿ ಊರಿನ ವಿಶೇಷ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಂಬಾರು ಗ್ರಾಮದ ಮಣಿಭಾಂಡ ಅಮ್ಮ್ಚೂರು ಸಂಪರ್ಕ ರಸ್ತೆಯ ಮೆಟ್ಟುತ್ತಾರು ಹೊಳೆಗೆ ಸೇತುವೆ ನಿರ್ಮಿಸಲು ಒಂದು ಬಾರಿ ಸುಪ್ರಿಂ ಕೋರ್ಟ್ ಮತ್ತು ಮೂರು ಬಾರಿ ಹೈಕೊರ್ಟ್‌ನಲ್ಲಿ ದಾವೆ ಹೂಡಿ ನಿರಂತರ ಹೋರಾಟ ಮಾಡಿ ಜಯಸಾಧಿಸಿ ಮತ್ತು ಹೈ ಕೊರ್ಟ್‌ನಿಂದ ಸರಕಾರಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಗೊಳಿಸುವಂತೆ ಆದೇಶ ಮಾಡಿಸಿ ಸೇತುವೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಗೊಳ್ಳುವಲ್ಲಿ ಶ್ರಮ ವಹಿಸಿದ ಸಾಧಕ ಹೈಕೋರ್ಟ್ ನ್ಯಾಯವಾದಿ ಪ್ರವೀಣ್ ಕುಮಾರ್ ಕೆ.ಎನ್. ಕುಮಾರಪುರ ಕಟ್ಟೆ, ಶ್ರೀರಾಮ ಚರಿತ ಕಥಾ ಭಾಗವನ್ನು ಹಿಂದಿಯಿಂದ ಕನ್ನಡ ಕ್ಕೆ ಅನುವಾದ ಮಾಡಿದ ಕೆಂಜಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟ್ರಮಣ ಭಟ್ ಇವರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನು ಮತ್ತು ಊರಿನ ಸಾಧಕರನ್ನು ಸನ್ಮಾನಿಸಿದವರು ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಓಡೋಲಿ, ಹೈಕೋರ್ಟ್ ನ್ಯಾವಾದಿ ಪ್ರವೀಣ್ ಕುಮಾರ್ ಕೆ.ಎನ್. ಮೊಗೆರಡ್ಕ ಶಾಲೆಯ ಎಸ್,ಡಿ,ಎಂ.ಸಿ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಲ್ಲರ್ತನೆ, ಯುವರಾಜ ಆಚಾರ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಬೋಟ್ಟಡ್ಕ ಕೆಂಜಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಗೌಡ ಕೂತೂರು, ದೈಹಿಕ ಶಿಕ್ಷಕ ವಿನಯ ಕಮರ್ಕಜೆ, ಎಲ್.ಐ.ಸಿ.ಯ ಕೃಷ್ಣಪ್ಪ ಗೌಡ ಕೆಂಜಲ ಇವರುಗಳು ಸನ್ಮಾನಿಸಿದರು.


ರಾಮಕೃಷ್ಣ ಡಿ. ಹೊಳ್ಳಾರು ಇವರ ಸಂಚಾಲಕತ್ವದಲ್ಲಿ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಶಶಿಧರ ಬೋಟ್ಟಡ್ಕ ಮತ್ತು ಕಮಲಾಕ್ಷ ಬೋಟ್ಟಡ್ಕ ಇವರು ನಿರೂಪಿಸಿದರು.
ಕಿಶೋರ್ ಹೊಳ್ಳಾರು, ಲೋಕೇಶ್ ಕಾಪಾರು, ಭುವನೇಶ್ವರ ಅಮ್ಮ್ಚೂರು, ಶಿವರಾಮ ಲೋಕೋಪಯೋಗಿ ಇಲಾಖೆ ಸುಬ್ರಮಣ್ಯ, ತಾರಾನಾಥ್ ಲೋಕೋಪಯೋಗಿ ಇಲಾಖೆ ಸುಬ್ರಮಣ್ಯ, ನಿತೀಶ್ ಕೂತೂರು, ಲಿಂಗಪ್ಪ ಪೋರ್ದೇಲು, ಜಗದೀಶ್ ಕೂತೂರು, ಕಮಲಾಕ್ಷ ಕೊಡೆಂಕಿರಿ, ಪುರುಷೋತ್ತಮ ಎರ್ಮಯಿಲ್, ಹೇಮಂತ್ ಡಿ.ಆರ್, ದೇವರಾಜ ಕೊಲ್ಕಜೆ, ಭಾಸ್ಕರ ಕೆ.ಸಿ. ಕೂತೂರು, ನಾಗೇಶ್ ಕಾಪಾರು ಸಹಕರಿಸಿದರು. ಬೆಳ್ಳಾರೆ ಜ್ಞಾನ ಗಂಗಾ ಶಾಲೆಯ ಶಿಕ್ಷಕಿ ವಾರಿಜಾಕ್ಷಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

“ತುಳುನಾಡ್ದ ತೆಲಿಕೆದ ತ್ರಿಮೂರ್ತಿಳು” ಬಿರುದು ಪ್ರಧಾನ
ಮಂಗಳೂರಿನ ಚಾಪರ್ಕ ತಂಡದ ಪ್ರಸಿದ್ಧ ಕಲಾವಿದರಾದ ರಾಜ್ಯ ಪ್ರಶಸ್ತಿ ವಿಜೇತರಾದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್ ಇವರುಗಳಿಗೆ ತುಳುನಾಡ್ದ ತೆಲಿಕೆದ ತ್ರಿಮೂರ್ತಿಳು ಗೌರವ ಬಿರುದನ್ನು ಗಂಗಾ ಪ್ರತಿಷ್ಟನ ಕುಮಾರಪುರ ಕಟ್ಟೆ, ಹಾಗೂ ಸನ್ಮಿತ್ರ ಗೆಳೆಯರ ಬಳಗ ಕೆಂಜಲ ವತಿಯಿಂದ ಪ್ರಶಸ್ತಿ, ಸನ್ಮಾನ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here