ನಾಳೆ(ಜ.19): ಪುತ್ತೂರಿನಲ್ಲಿ ವಿನೂತನ ಸೊನೆಟ್ ಅನಾವರಣ , ಬೃಹತ್ ಕಾರು ಮೇಳ

0

ಪುತ್ತೂರು : ಮಂಗಳೂರಿನ ಕದ್ರಿ ಬಳಿಯ ಹೆಸರಾಂತ ಕಿಯಾ ಕಾರು ಡೀಲರ್ ಎ.ಆರ್.ಎಂ. ಕಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಇದರ ಜಂಟಿ ಆಶ್ರಯದಲ್ಲಿ ಕಿಯಾ ಕಾರುಗಳ ಬೃಹತ್ ಮೇಳ ಮತ್ತು ಕಂಪನಿಯು ಮಾರುಕಟ್ಟೆಗೆ ವಿನೂತನವಾಗಿ ಪರಿಚಯಸಿರುವ ಸೊನೆಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಇಲ್ಲಿನ ದರ್ಬೆ ಬೈಪಾಸ್ ಬಳಿಯ ರೈ ಎಸ್ಟೇಟ್ ಆ್ಯಂಡ್ ಬಿಲ್ಡರ್ಸ್ ಸಂಕೀರ್ಣ ಮುಂಭಾಗದಲ್ಲಿ ಅದ್ದೂರಿಯಾಗಿ ನೆರವೇರಲಿದೆ.

ಜ.19 ರಂದು ವಿನೂತನ ಕಾರಿನ ಬಿಡುಗಡೆಯ ಬಳಿಕ ಜ.20 ಸಂಜೆ ತನಕ ಬೃಹತ್ ಕಾರು ಮೇಳ ನಡೆಯಲಿದ್ದು , ಕಾರುಗಳ ಪ್ರದರ್ಶನದ ಜೊತೆಗೆ ಬ್ಯಾಂಕ್ ಆಫ್ ಬರೋಡಾ ಇದರ ವತಿಯಿಂದ ಶೇಕಡಾ 8.80 ವಾರ್ಷಿಕ ಬಡ್ಡಿಯಲ್ಲಿ ತ್ವರಿತ ಲೋನ್ ವ್ಯವಸ್ಥೆ , ಫಿಕ್ಸೆಡ್ ಮತ್ತು ಫ್ಲೋಟಿಂಗ್ ಲೋನ್ ಫೆಸಿಲಿಟಿ ಜೊತೆಗೆ 90% ವರೆಗಿನ ಸಾಲ ಸೌಲಭ್ಯವೂ ಇದ್ದು ,ಕಾರು ಪ್ರಿಯರು ಈ ಮೇಳದ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.ಅಧಿಕ ಮಾಹಿತಿಗಾಗಿ 9606013163 ಅಥವಾ 9606055306 ಸಂಖ್ಯೆ ಸಂಪರ್ಕಿಸಿ , ಮಾಹಿತಿ ಪಡೆಯುವಂತೆ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here