ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಆತಾಜೆ ಮೇದಪ್ಪ ಗೌಡ (48 ವ.)ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತಾಜೆ ಬಾಲಕೃಷ್ಣ ಗೌಡ ಎಂಬವರ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನ ದೊಡ್ಡಪ್ಪನ ಮಗನಾದ ಮೇದಪ್ಪ ಗೌಡರವರು ತನ್ನ ಅಣ್ಣನ ಪತ್ನಿ ಯಶೋಧ ಮತ್ತು ಮಗಳು ರಾಶಿಯವರೊಂದಿಗೆ ವಾಸವಾಗಿರುತ್ತಾರೆ. ಜ 17ರಂದು ರಂದು ಬೆಳಗ್ಗೆ ಮೇದಪ್ಪ ಗೌಡರ ಅಣ್ಣನ ಪತ್ನಿ ಯಶೋಧರವರು ಹೂ ಹೆಕ್ಕಲು ಹೋಗಿದ್ದು ಹೂ ಹೆಕ್ಕಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಮೇದಪ್ಪ ಗೌಡರು ಇಲ್ಲದೇ ಇದ್ದು ನಂತರ ಮೇದಪ್ಪ ಗೌಡರವರ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಕರೆ ಸ್ವೀಕರಿಸಲಿಲ್ಲ. ಬಳಿಕ ಮನೆಯ ಸುತ್ತಮುತ್ತ ಹುಡುಕಾಡಿದಾಗ ಮೇದಪ್ಪ ಗೌಡರು ಮನೆಯ ಹತ್ತಿರ ಸುಮಾರು 50 ಮೀಟರ್ ದೂರದಲ್ಲಿರುವ ಶೇಷಪ್ಪ ಗೌಡರ ಗೇರು ತೋಟದಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದು, ಯು ಡಿ ಆರ್ 02/2024 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.