ರಾಮಕೃಷ್ಣ ಸೇವಾ ಸಮಾಜದಲ್ಲಿ ಧಾರ್ಮಿಕ ಶಿಕ್ಷಣ ವಾರ್ಷಿಕೋತ್ಸವ ಸಂಭ್ರಮ

0

ಪುತ್ತೂರು: ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಮುನ್ನಡೆಯುವ ಛಲವನ್ನು ಮೈಗೂಡಿಸಿಕೊಂಡು, ಉನ್ನತ ಶಿಕ್ಷಣ ಪಡೆಯುವ ಗುರಿಯನ್ನು ಹೊಂದಬೇಕು ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಮುಳಿಯ ಹೇಳಿದರು. ಇವರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆಸಲ್ಪಡುವ 18 ಕೇಂದ್ರಗಳಲ್ಲಿ ಒಂದಾದ ರಾಮಕೃಷ್ಣ ಸೇವಾ ಸಮಾಜದಲ್ಲಿ ಜ.21ರಂದು ನಡೆದ ಧಾರ್ಮಿಕ ಶಿಕ್ಷಣ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನೆರೆದ ಸೇವಾ ಸಮಾಜದ ಮಕ್ಕಳಿಗೆ ಶುಭಹಾರೈಸಿದರು.

ಓಂಕಾರ ನಾದದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ಸೇವಾ ಸಮಾಜದ ಆಡಳಿತ ಮಂಡಳಿಯ ಉಪಕಾರ್ಯದರ್ಶಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವತ್ಸಲಾ ರಾಜ್ಞಿ ಪ್ರಾಸ್ತಾವಿಕ ನುಡಿಗಳನ್ನಾಡಿ ಆಗಮಿಸಿದ ಅಭ್ಯಾಗತರನ್ನು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣವೇಣಿ ಮುಳಿಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸೇವಾ ಸಮಾಜದ ಮಕ್ಕಳು, ಶ್ರೀರಾಮ ತಾರಕ ಮಂತ್ರ, ಶ್ಲೋಕಗಳು, ಕಗ್ಗಗಳು, ಪುರಾಣ ಕಥೆ, ಆಚಾರ ವಿಚಾರ ಹಾಗೂ ಭಜನೆ ಇತ್ಯಾದಿಗಳನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಶಿಕ್ಷಣದ ಸಂಯೋಜಕ ಸತೀಶ್ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಅಡೂರು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭಹಾರೈಸಿದರು. ಸೇವಾ ಸಮಾಜದ ಕಾರ್ಯದರ್ಶಿಗಳಾದ ಗುಣಪಾಲ ಜೈನ್ ಮಕ್ಕಳ ಧಾರ್ಮಿಕ ಶಿಕ್ಷಣದ ಕಲಿಕೆ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ, ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಸೇವಾ ಸಮಾಜದ ಮಕ್ಕಳು ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶಂಕರಿಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ, ಲಘು ಉಪಹಾರದೊಂದಿಗೆ ವಾರ್ಷಿಕೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here