ರಾಮಕುಂಜ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಜ.22ರಂದು ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀರಾಮನಾಮ ತಾರಕ ಯಜ್ಞ, ಶ್ರೀರಾಮ ದೇವರಿಗೆ ಪರಮಾನಸೂಕ್ತ ಶತನಾಮಸಹಿತ ಪಂಚಾಮೃತಾಭಿಷೇಕ ನಡೆಯಿತು. ಶಾರದಾನಗರ ಶ್ರೀ ಶಾರದಾಂಬಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಗೌರವಾರ್ಪಣೆ:
25ವರ್ಷದ ಹಿಂದೆ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಭಾಗವಹಿಸಿದ್ದ ರಾಮಕುಂಜ ಗ್ರಾಮದ ಆನ ನಿವಾಸಿ, ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ರವೀಂದ್ರ ಆನ ಅವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು. ಹಿರಿಯ ಧಾರ್ಮಿಕ ಮುಖಂಡರಾದ ಮಾಧವ ಆಚಾರ್ಯ ಇಜ್ಜಾವು ದೇವಸ್ಥಾನದ ಪರವಾಗಿ ಗೌರವಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನವ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕಿಮಠ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ, ಮಾಜಿ ಸದಸ್ಯರು, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ದಿವಾಕರ ರಾವ್ ರಾಮಕುಂಜ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ ಆರ್.ಕೆ. ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.