ಬಲ್ಯ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ವೀಕ್ಷಣೆ-ಕರಸೇವಕರಿಗೆ ಸನ್ಮಾನ

0

ಕಡಬ; ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ವೀಕ್ಷಣೆ ಹಾಗೂ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ 1992ರಲ್ಲಿ ಅಯೋಧ್ಯಗೆ ಕರಸೇವಕರಾಗಿ ಹೋಗಿ ಸೇವೆ ಸಲ್ಲಿಸಿದ ಡಾ ಸುರೇಶ್ ಕುಮಾರ್ ಕೂಡೂರು ಹಾಗೂ ಪುರುಷೋತ್ತಮ ಗೌಡ ಪನ್ಯಾಡಿ ಅವರಿಗೆ ದೇವಸ್ಥಾನದ ವಿವಿಧ ಸಮಿತಿಗಳ ಆಶ್ರಯದಲ್ಲಿ ಮತ್ತು ರಾಮಭಕ್ತರ ವತಿಯಿಂದ ಶಾಲು ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಡಾ ಸುರೇಶ್ ಕುಮಾರ್ ಕೂಡೂರು 1992 ರಲ್ಲಿ ಅಯೋದ್ಯೆಯಲ್ಲಿ ನಡೆದ ಕರಸೇವೆಯನ್ನು ಸಭೆಯಲ್ಲಿ ಹಂಚಿಕೊಂಡರು. ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷ ರಾಮಚರಣ್ ರೈ ಮಾಣಿಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು, ಕೋಶಾಧಿಕಾರಿ ಶ್ರೀ ರಾಜರಾಮ್ ಭಟ್ ಹೊಸ್ಮಠ, ಉಪಾಧ್ಯಕ್ಷೆ ದೇವಕಿ ಎಸ್ ಕೂಡೂರು ಟ್ರಸ್ಟಿನ ಸದಸ್ಯರಾದ ಸತೀಶಚಂದ್ರ ಶೆಟ್ಟಿ ಬೀರುಕ್ಕು, ತಿಮ್ಮಪ್ಪ ಕರ್ಕೇರ ಮತ್ರಾಡಿ, ಸರಸ್ವತಿ ಆರ್ ರೈ ಪಟ್ಟೆ, ಚಂದ್ರಹಾಸ ಜಿ ಗೋವಿಂದಕಟ್ಟೆ, ರಾಮಯ್ಯ ಗೌಡ ಬೈಲಾಡೈ, ಶಾಂತರಾಮ ರೈ ಬೆದ್ರಾಡಿ, ತನಿಯ ಸಂಪಡ್ಕ, ಮತ್ತು ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ, ಉಪಾಧ್ಯಕ್ಷ ರಮೇಶ್ ಗೌಡ ನಾಲ್ಗುತ್ತು, ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಗುಂಡಿಜಾಲು ಜತೆ ಕಾರ್ಯದರ್ಶಿ ಅಜೇಶ್ ಗೋವಿಂದಕಟ್ಟೆ ಹಾಗೂ ಉತ್ಸವ ಸಮಿತಿಯ ಹಲವು ಸದಸ್ಯರು, ಗೌರವ ಸಲಹೆಗಾರರಾದ ಧನಂಜಯ ಗೌಡ ಕೊಡಂಗೆ, ಬಿ ಎಂ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ಜಗನ್ನಾಥ ಶೆಟ್ಟಿ ಗುಂಡಿಜಾಲು, ಭಜನಾ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ ರೈ ನಾಲ್ಗುತ್ತು ಮತ್ತು ಸದಸ್ಯರು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರು, ದೇವಸ್ಥಾನದ ಬೈಲುವಾರು ಪ್ರತಿನಿಧಿಗಳು, ದೇವಸ್ಥಾನದ ಪ್ರಧಾನ ಅರ್ಚಕ ರವಿಪ್ರಸಾದ್ ಭಟ್ ಮತ್ತು ಅಯೋಧ್ಯೆ ತಿರ್ಥ ಕ್ಷೇತ್ರ ಟ್ರಸ್ಟ್ ನ ಪ್ರಮುಖರು, ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಲವು ಹಿಂದೂಪರ ಸಂಘಟನೆಗಳ ಪ್ರಮುಖರು, ಸುಮಾರು 500 ಕ್ಕಿಂತಲೂ ಹೆಚ್ಚು ಶ್ರೀರಾಮಭಕ್ತರ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಯಿತು. ವಿಶೇಷವಾಗಿ ಬೆಳಿಗ್ಗೆ ಶ್ರೀ ಉಮಾಮಹೇಶ್ವರಿ ಮಹಿಳಾ ಭಜನಾ ಮಂಡಳಿ ಹಾಗೂ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಬಲ್ಯ ಇವರಿಂದ ಭಜನಾ ಕಾರ್ಯಕ್ರಮ, ಪ್ರಾಣ ಪ್ರತಿಷ್ಟೇಯ ನೇರ ಪ್ರಸಾರ, 108 ಬಾರಿ ಶ್ರೀರಾಮ ತಾರಕಮಂತ್ರ, ದೇವರಿಗೆ ಮಹಾಪೂಜೆ, ಭಜನೆ ಮಂಗಳ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು ದೇವಸ್ಥಾನದ ಕಾರ್ಯದರ್ಶಿ ಶ್ರೀ ನಾರಾಯಣ ಎನ್ ಕೊಲ್ಲಿಮಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here