ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ಬಾಲ ರಾಮ ದೇವರ ಪ್ರತಿಷ್ಠೆಯ ದಿನದಂದು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಲಘು ಉಪಹಾರ ಮತ್ತು ಅಯೋಧ್ಯಯಲ್ಲಿ ಕರ ಸೇವೆಗೈದ ವಸಂತ ಗೌಡ ಪಯಂದೂರ್‌ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೋಚಣ್ಣ ಪೂಜಾರಿ ಎಂಡೆಸಾಗು, ಶ್ರೀ ಅಯ್ಯಪ್ಪ ಭಜನಾ ಮಂದಿರ ಸ್ವಾಮಿನಗರ ಇದರ ಅಧ್ಯಕ್ಷರು ಸತೀಶ್ ಎಚ್.ಕೆ ಎಂಡೆಸಾಗು, ಆನಂದ್ ಶೆಟ್ಟಿ ತ್ಯಾಗರಾಜ ನಗರ, ಪುತ್ತೂರು ತಾಲೂಕು ನಲಿಕೆ ಸೇವಾ ಸಮಾಜ ಸಂಘದ ಅಧ್ಯಕ್ಷ ರವಿ ಅಜಿಲ ಸ್ವಾಮಿ ನಗರ, ತಿಂಗಳಾಡಿ ಆಟೋ ಚಾಲಕ ಗಣೇಶ್, ಸಂಘಟನೆಯ ಅಧ್ಯಕ್ಷ ರಘುನಾಥ್ ಗೋಳ್ತಿಲ, ಲೋಕೇಶ್ ಸ್ವಾಮಿನಗರ, ವಿನೋದ್ ಸ್ವಾಮಿನಗರ, ಸತೀಶ್ ಮಜ್ಜಾರ್,ನವೀನ್ ಮಜ್ಜಾರ್, ಗುರುಪ್ರಸಾದ್ ಮಜ್ಜಾರ್, ಸಾಂತಪ್ಪ ಪೂಜಾರಿ ಓಲ್ತಾಜೆ, ಅನಿಶ್ ಮಣಿಯಣಿ ಗೊಲ್ತಿಲ, ದೀಪಕ್ ಕೋಡಿಯಡ್ಕ, ದೀಕ್ಷಿತ್ ಕೋಡಿಯಡ್ಕ, ಜಗದೀಶ್ ಕೋಡಿಯಡ್ಕ, ಗೌತಮ್ ಕೋಡಿಯಡ್ಕ,ಸಂಘಟನೆಯ ಯುವ ಪ್ರಶಸ್ತಿ ಪುರಸ್ಕೃತ ಸಮಿತ್ ಮಜ್ಜಾರ್, ಉದಯ ಸ್ವಾಮಿನಗರ, ಭವಿತ್ ಸ್ವಾಮಿನಗರ, ಭುವನ್ ಮಜ್ಜಾರ್, ಹೇಮಚಂದ್ರ ಕೋಡಿಯಡ್ಕ,ರಿತನ್ ಗೋಳ್ತಿಲ, ಜಗದೀಶ್ ಕೊಂಬರಡ್ಕ, ಸುಜನ್ ಕೊಲ್ಲಾಜೆ, ಮುನ್ನ ಕೊಂಬರಡ್ಕ, ಕೀರ್ತನ್ ಕೊಂಬರಡ್ಕ, ಕಿರಣ್ ಕೊಂಬರಡ್ಕ,ಸುಭಾಸ್ ಕೊಂಬರಡ್ಕ, ಶೀನ ಸ್ವಾಮಿನಗರ, ರಮೇಶ್ ಸ್ವಾಮಿನಗರ, ಮಾನ್ವಿನ್ ರೈ ಸ್ವಾಮಿನಗರ, ಚಂದ್ರಿಕಾ ಸ್ವಾಮಿನಗರ, ಸುಜಾತಾ ಸ್ವಾಮಿನಗರ,ಕುಸಮ ಮಜ್ಜಾರಡ್ಕ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.
ರಸ್ತೆ ಬದಿಯಲ್ಲೇ ಲಘು ಉಪಹಾರ, ಪಾನಕ ವ್ಯವಸ್ಥೆ
ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಸಂಘಟನೆಯ ವತಿಯಿಂದ ಶ್ರೀ ರಾಮೋತ್ಸವದ ಅಂಗವಾಗಿ ಕುಂಬ್ರ ಬೆಳ್ಳಾರೆ ರಾಜ್ಯ ಹೆದ್ದಾರಿಯ ತ್ಯಾಗರಾಜನಗರದಲ್ಲಿ ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಲಘು ಉಪಹಾರ ಹಾಗೂ ಪಾನಕ ಮತ್ತು ಸಿಹಿ ಹಂಚುವ ವ್ಯವಸ್ಥೆ ಮಾಡಿದ್ದು ಇದನ್ನು ಸಾರ್ವಜನಿಕರಿಗೆ ಹಂಚಿ ಶ್ರೀ ರಾಮನ ಪ್ರತಿಷ್ಠೆಯ ದಿನದ ಸಂಭ್ರಮ ಆಚರಿಸಲಾಯಿತು. ಮೋಹನ್ ಬಂಗಾರ್ ಗುಡ್ಡೆ ಉಪಹಾರ ತಯಾರಿಸಿದರು, ಪುರುಷೋತ್ತಮ್ ಗೋಳ್ತಿಲ ಸಿಹಿ ತಿಂಡಿ ನೀಡಿದ್ದರು, ಲೋಕೇಶ್ ರೈ ಪಯಂದೂರ್, (ಟ್ಯಾಂಕರ್ ), ದಯಾನಂದ ರೈ ಕೊಲ್ಲಾಜೆ, ಕೇಶವ ಸ್ವಾಮಿನಗರ, ಸುನಿಲ್ ಸ್ವಾಮಿನಗರ ಇವರು ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದ್ದರು. ಸಂಘಟನೆಯ ಕಾರ್ಯದರ್ಶಿ ರಾಜೇಶ್ ಕೆ ಮಯೂರ ಸ್ವಾಗತಿಸಿ, ವಂದಿಸಿದರು.