ನೆಲ್ಯಾಡಿ ಗ್ರಾ.ಪಂ.: ವಿಕಸಿತ ಭಾರತ ಸಂಕಲ್ಪ ಯಾತ್ರೆ

0

ನೆಲ್ಯಾಡಿ: ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಯೋಜಿಸಿರುವ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ನೆಲ್ಯಾಡಿ ಗ್ರಾ.ಪಂ.ನಡೆಯಿತು.
ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಉದ್ಘಾಟಿಸಿದರು. ಗ್ರಾ.ಪಂ.ಪಿಡಿಒ ಆನಂದ್ ಅವರು ಸಂಕಲ್ಪ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕೆನರಾ ಬ್ಯಾಂಕ್ ಹಣಕಾಸು ವಿಭಾಗದ ಅಧಿಕಾರಿ ಗೀತಾ ವಿಜಯನ್‌ರವರು ಬ್ಯಾಂಕ್ ನೀಡುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ, ಆರೋಗ್ಯ ಇಲಾಖೆಯ ಶ್ಯಾಮಲಾ ಅವರು ಇಲಾಖಾವಾರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ ಉಪಸ್ಥಿತರಿದ್ದರು.

ಫಲಾನುಭವಿಗಳಿಗೆ ಸನ್ಮಾನ:
ಮುದ್ರಾ ಯೋಜನೆಯ ಫಲಾನುಭವಿ ಸುನೀತಾ ಬಾಬುರಾಜ್, ಭತ್ತದ ನಾಟಿ ಕೃಷಿಕ ವಾಸಪ್ಪ ನಾಯ್ಕ ಸಂಪಿಗೆತಡಿ, ವಿದ್ಯಾರ್ಥಿನಿ ಪ್ರಾಪ್ತಿ ಪಡುಬೆಟ್ಟುರವರನ್ನು ಸನ್ಮಾನಿಸಲಾಯಿತು. ಎಲ್‌ಇಡಿ ಸ್ಕ್ರೀನ್ ಮೂಲಕ ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತೋರಿಸಲಾಯಿತು ಪಿಡಿಒ ಆನಂದರವರು ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಲ್ ವಂದಿಸಿದರು. ಸುಧೀರ್ ಕುಮಾರ್ ಕೆ.ಎಸ್ ನಿರೂಪಿಸಿದರು. ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯವರು ಕೆವೈಸಿ ನಡೆಸಿಕೊಟ್ಟರು. ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಮಾಡಲಾಯಿತು. ಆರೋಗ್ಯ ಇಲಾಖೆಯವರು ಬಿಪಿ ಮತ್ತು ಶುಗರ್ ಟೆಸ್ಟ್ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಸದಸ್ಯರು, ಊರಿನ ಮುಖಂಡರು, ಫಲಾನುಭವಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here