ಪುತ್ತೂರು: ಇಲ್ಲಿನ ವಿವೇಕಾನಂದ ಶಿಶುಮಂದಿರದ ವಾರ್ಷಿಕ ಹಬ್ಬ ಶಿಶುಸಂಭ್ರಮ’ ಶಿಶುಮಂದಿರದ ಆವರಣದಲ್ಲಿ ನಡೆಯಿತು. ಅತಿಥಿಗಳು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ತಂಗಡಿಯ ಕಾರ್ಯವಾಹಿಕಾ ರಾಷ್ಟ್ರ ಸೇವಿಕಾ ಸಮಿತಿಯ ಮಂಗಳಾ ಕೆ.ರವರು ಮುಖ್ಯ ಭಾಷಣಕಾರರಾಗಿ ಮಾತನಾಡಿ, ಮಕ್ಕಳು ಮಣ್ಣಿನ ಮುದ್ದೆಯಿದ್ದಂತೆ. ಅದಕ್ಕೆ ಕಲ್ಲು ಹಾಕಿದರೆ ಅಂಟಿಕೊಳ್ಳುವಂತೆ ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತಿದರೆ ಮಕ್ಕಳು ಉತ್ತಮ ವಿಚಾರಗಳನ್ನು ಕಲಿಯುತ್ತಾರೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೆ.ಯಂ.ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನ್ಯೂ ಮಾನಕ ಜ್ಯುವೆಲ್ಲರ್ಸ್ನ ಸಿದ್ಧನಾಥ ಎಸ್.ಕೆ.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಜಗೋಪಾಲ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶುಮಂದಿರದ ಮುಖ್ಯ ಮಾತಾಜಿ ರೇಖಾ ಕುಮಾರಿ ವಾರ್ಷಿಕ ವರದಿ ವಾಚಿಸಿದರು. ಬಿರ್ಮಣ್ಣ ಗೌಡರಿಗೆ ಧರ್ಮಸಮ್ಮಾನ’ ಮಾಡಲಾಯಿತು. ಶಿಶುಮಂದಿರದ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಲಾಯಿತು.ಮಾತೆಯರಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಕ್ಕಳಿಂದಸಾಂಸ್ಕೃತಿಕ ಸೌರಭ’ ನಡೆಯಿತು.ಮಾತೆಯರಿಂದ ವೈಯುಕ್ತಿಕ ಗೀತೆ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.
ಶಿಶುಮಂದಿರದ ಮಕ್ಕಳು ಪ್ರಾರ್ಥನೆ ಹಾಗೂ ದೀಪ ಜ್ಯೋತಿ ಹಾಡಿದರು.ಶಿಶು ಮಂದಿರದ ಪುಟಾಣಿ ಶರ್ವಶಂಕರ ಅತಿಥಿಗಳನ್ನು ಸ್ವಾಗತಿಸಿ, ವಾರುಣಿ ನಿತ್ಯ ಪಂಚಾಂಗ ಪಠಣ ಮಾಡಿದರು.ಆಡಳಿತ ಮಂಡಳಿಯ ಸದಸ್ಯ ಅಶೋಕ್ ಬಲ್ನಾಡು ವಂದಿಸಿದರು. ಶಾಂತಿಮಂತ್ರದ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.